ರಾಜಸ್ಥಾನದಲ್ಲಿ ಒಂದೇ ದಿನ 21 ಹೊಸ ಓಮಿಕ್ರಾನ್ ಸೋಂಕು ಪ್ರಕರಣಗಳ ಪತ್ತೆ; ಒಟ್ಟಾರೆ ಸಂಖ್ಯೆ 43ಕ್ಕೆ ಏರಿಕೆ

ರಾಜಸ್ಥಾನದಲ್ಲಿ ಒಂದೇ ದಿನ 21 ಹೊಸ ಓಮಿಕ್ರಾನ್ ಸೋಂಕು ಪ್ರಕರಣಗಳ ಪತ್ತೆಯಾಗಿದ್ದು, ಆ ಮೂಲಕ ಈ ವರೆಗೂ ಪತ್ತೆಯಾದ ಕೋವಿಡ್ ನ ಹೊಸ ರೂಪಾಂತರಿಗಳ ಸಂಖ್ಯೆ ರಾಜ್ಯದಲ್ಲಿ 43ಕ್ಕೇರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೈಪುರ: ರಾಜಸ್ಥಾನದಲ್ಲಿ ಒಂದೇ ದಿನ 21 ಹೊಸ ಓಮಿಕ್ರಾನ್ ಸೋಂಕು ಪ್ರಕರಣಗಳ ಪತ್ತೆಯಾಗಿದ್ದು, ಆ ಮೂಲಕ ಈ ವರೆಗೂ ಪತ್ತೆಯಾದ ಕೋವಿಡ್ ನ ಹೊಸ ರೂಪಾಂತರಿಗಳ ಸಂಖ್ಯೆ ರಾಜ್ಯದಲ್ಲಿ 43ಕ್ಕೇರಿಕೆಯಾಗಿದೆ.

ಈ ಬಗ್ಗೆ ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜಸ್ಥಾನದಲ್ಲಿ ಇಂದು ಒಂದೇ ದಿನ ಕೋವಿಡ್-19 ಹೊಸ ರೂಪಾಂತರಿ ಒಮೈಕ್ರಾನ್ 21 ಹೊಸ ಪ್ರಕರಣಗಳು ವರದಿಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 43ಕ್ಕೆ ಏರಿಯಾಗಿದೆ.  ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಮಾದರಿಯ ಪರೀಕ್ಷೆ ನಡೆಸಿದಾಗ 21 ಮಂದಿಗೆ ಒಮೈಕ್ರಾನ್‍ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ 21 ಹೊಸ ಪ್ರಕರಣಗಳಲ್ಲಿ ಜೈಪುರವೊಂದರಲ್ಲೇ 11 ಪ್ರಕರಣಗಳಿದ್ದು, ಅಜ್ಮೀರ್ ನಿಂದ ಆರು ಮತ್ತು ಉದಯಪುರ್ ನಿಂದ ಮೂರು ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದ ಒಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ.  ಈ ಸೋಂಕಿತರಲ್ಲಿ ಐವರು ವಿದೇಶದಿಂದ ಮರಳಿದವರಾಗಿದ್ದು, ಮೂವರು ವಿದೇಶಿ ಪ್ರಯಾಣಿಕರೊಂದಿಗೆ ಸಂಪರ್ಕಕ್ಕೆ ಹೊಂದಿದವರಾಗಿದ್ದಾರೆ. ರಾಜಸ್ಥಾನದಲ್ಲಿ ಸಕ್ರಿಯವಾಗಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ 244 ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com