ಮಧುಬನ್ ಹಾಡು ತೆಗೆದು, 3 ದಿನದಲ್ಲಿ ಕ್ಷಮೆ ಕೇಳಿ: ಸನ್ನಿ, ಗಾಯಕರಿಗೆ ಮಧ್ಯಪ್ರದೇಶ ಗೃಹ ಸಚಿವರಿಂದ ಎಚ್ಚರಿಕೆ 

ಮೂರು ದಿನದೊಳಗೆ ನಟಿ ಸನ್ನಿ ಲಿಯೋನ್ ಮತ್ತು ಗಾಯಕಾರದ ಶರೀಬ್, ತೋಶಿ ಕ್ಷಮೆ ಕೇಳಬೇಕು. ಅಲ್ಲದೇ, ಮಧುಬನ್ ಮೇ ರಾಧಿಕಾ, ಜೈ ಸೆ ಜಂಗಲ್ ಮೆ ನಾಚೆ ಮೋರ್ ವಿಡಿಯೋ ಸಾಂಗ್ ನ್ನು ತೆಗೆದುಹಾಕಬೇಕು, ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು  ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಸಿದ್ದಾರೆ. 
ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ಸನ್ನಿ ಲಿಯೋನ್  ಚಿತ್ರ
ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ಸನ್ನಿ ಲಿಯೋನ್ ಚಿತ್ರ

ಭೋಪಾಲ್: ಮೂರು ದಿನದೊಳಗೆ ನಟಿ ಸನ್ನಿ ಲಿಯೋನ್ ಮತ್ತು ಗಾಯಕಾರದ ಶರೀಬ್, ತೋಶಿ ಕ್ಷಮೆ ಕೇಳಬೇಕು. ಅಲ್ಲದೇ, ಮಧುಬನ್ ಮೇ ರಾಧಿಕಾ, ಜೈ ಸೆ ಜಂಗಲ್ ಮೆ ನಾಚೆ ಮೋರ್ ವಿಡಿಯೋ ಸಾಂಗ್ ನ್ನು ತೆಗೆದುಹಾಕಬೇಕು, ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು  ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಸಿದ್ದಾರೆ. 

ಈ ಮ್ಯೂಸಿಕ್  ವಿಡಿಯೋ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಸಚಿವರು ಆರೋಪಿಸಿದ್ದು, ಕೆಲವು ವಿಧರ್ಮಿಗಳು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. 'ಮಧುಬನ್ ಮೇ ರಾಧಿಕಾ ನಾಚೆ' ವಿಡಿಯೋ ಅಂತಹ ಖಂಡನೀಯ ಪ್ರಯತ್ನವಾಗಿದೆ ಎಂದಿದ್ದಾರೆ. 

 ಸನ್ನಿ ಲಿಯೋನ್ , ಜಿ. ಶರೀಬ್ ಮತ್ತು ತೋಶಿ ಜಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡುತ್ತಿದ್ದೇನೆ. ಅವರು ಮೂರು ದಿನದೊಳಗೆ ಕ್ಷಮೆ ಯಾಚಿಸಿ, ಹಾಡನ್ನು ತೆಗೆದುಹಾಕದಿದ್ದರೆ ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. 

ಕಳೆದ ವಾರ ಬಿಡುಗಡೆಯಾದ ಈ ಹಾಡನ್ನು ಶರೀಬ್ ಮತ್ತು ತೋಶಿ ಹಾಡಿದ್ದು, ಸನ್ನಿ ಲಿಯೋನ್ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.  ಶನಿವಾರ ಉತ್ತರ ಪ್ರದೇಶದ ಮಥುರಾದಲ್ಲಿ ಪುರೋಹಿತರು ಸನ್ನಿ ಲಿಯೋನ್ ಅವರ ಇತ್ತೀಚಿನ ವಿಡಿಯೋ ಆಲ್ಬಂ ನಿಷೇಧಿಸಬೇಕೆಂದು ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com