ಚಾಕು ಹಿಡಿದ ಕಳ್ಳನೊಡನೆ ಯುವತಿ ಏಕಾಂಗಿ ಹೋರಾಟ: ಜನರು ಹೆಣ್ಮಕ್ಕಳ ನೆರವಿಗೆ ಬರುವುದಿಲ್ಲ, ಆತ್ಮರಕ್ಷಣೆ ಕಲೆ ಕಲಿಯಿರಿ ಎಂದ ಯುವತಿ

20 ವರ್ಷದ ಕಾಲೇಜು ವಿದ್ಯಾರ್ಥಿನಿ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಮನೆಯ ಬಳಿಯ ಸ್ಟಾಪ್ ಮಿಸ್ಸಾಗಿದ್ದರಿಂದ ಮುಂದಿನ ಸ್ಟಾಪಿನಲ್ಲಿ ಆಕೆ ಇಳಿದಿದ್ದಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೂರ್ಕೆಲ: ಮಧ್ಯರಾತ್ರಿ ಬಸ್ಸಿನಿಂದಿಳಿದು ಮನೆಗೆ ಹೋಗುತ್ತಿದ್ದ ವೇಳೆ ದುಷ್ಕರ್ಮಿಯೋರ್ವ ಜನರ ಸಮ್ಮುಖದಲ್ಲೇ ಚಾಕು ಹಿಡಿದು ಬೆದರಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

20 ವರ್ಷದ ಕಾಲೇಜು ವಿದ್ಯಾರ್ಥಿನಿ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಮನೆಯ ಬಳಿಯ ಸ್ಟಾಪ್ ಮಿಸ್ಸಾಗಿದ್ದರಿಂದ ಮುಂದಿನ ಸ್ಟಾಪಿನಲ್ಲಿ ಆಕೆ ಇಳಿದಿದ್ದಳು. ಅಮ್ಮನೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಾ ಯುವತಿ ಮನೆಯ ಕಡೆಗೆ ಆ ಕತ್ತಲಲ್ಲಿ ಹೆಜ್ಜೆ ಹಾಕಿದ್ದಳು.

ಈ ಸಂದರ್ಭ ಅಪರಿಚಿತ ದುಷ್ಕರ್ಮಿಯೋರ್ವ ಆಕೆಯನ್ನು ಹಿಂಬಾಲಿಸಿದ್ದ. ಆಕೆಗೆ ಗೊತ್ತಾಗುವಷ್ಟರಲ್ಲಿ ಚಾಕು ತೆಗೆದು ಆಕೆಯ ಬಳಿ ಇದ್ದ ಒಡವೆ, ಮೊಬೈಲು, ಹಣವನ್ನು ನೀಡೆಂದು ಬೆದರಿಕೆ ಒಡ್ಡಿದ.

ದುಷ್ಕರ್ಮಿಯ ಬೆದರಿಕೆಗೆ ಬಗ್ಗದ ಯುವತಿ ಆತನಿಗೆ ಪ್ರತಿರೋಧ ಒಡ್ಡಿದರೂ ಪ್ರಯೋಜನವಾಗಲಿಲ್ಲ. ಆಕೆಯ ವಸ್ತುಗಳನ್ನು ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಆಕೆಯ ಸುತ್ತಮುತ್ತ ಜನರಿದ್ದರೂ ಯಾರೊಬ್ಬರೂ ಆಕೆಯ ಸಹಾಯಕ್ಕೆ ಧಾವಿಸಲಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಪ್ರತಿಯೊಬ್ಬ ಹೆಣ್ಣುಮಕ್ಕಳು ಆತ್ಮರಕ್ಷಣೆ ಕಲೆಯನ್ನು ಕಲಿತುಕೊಳ್ಳಬೇಕು. ಹೆಣ್ಣುಮಕ್ಕಳ ಸಹಾಯಕ್ಕೆ ಮೂರನೆಯವರನ್ನು ನೆಚ್ಚಿಕೊಳ್ಳುವುದು ಅಪಾಯಕಾರಿ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com