ರೂಪಾಂತರಿ ವೈರಸ್ ಓಮಿಕ್ರಾನ್ ನಮ್ಮ ಮನೆ ಬಾಗಿಲು ತಟ್ಟಿದೆ ಎಂಬುದು ನೆನಪಿನಲ್ಲಿರಲಿ: ಪ್ರಧಾನಿ ಮೋದಿ

ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ನಮ್ಮ ಮನೆ ಬಾಗಿಲು ತಟ್ಟಿದ್ದು, ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ಸೋಲಿಸಲು ನಾಗರೀಕರಾಗಿ ನಮ್ಮ ಪ್ರಯತ್ನ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ನಮ್ಮ ಮನೆ ಬಾಗಿಲು ತಟ್ಟಿದ್ದು, ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ಸೋಲಿಸಲು ನಾಗರೀಕರಾಗಿ ನಮ್ಮ ಪ್ರಯತ್ನ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ಮನ್ ಕೀ ಬಾತ್ ಕಾರ್ಯಕ್ರಮದ 84ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಕುಟುಂಬವಾಗಿ ಒಟ್ಟಿಗೆ ನಿಂತಿರುವ ಭಾರತವನ್ನು ಶ್ಲಾಘಿಸಿದ್ದಾರೆ.

ಮನ್ ಕೀ ಬಾತ್ ಸರ್ಕಾರದ ಕೆಲಸವನ್ನು ಎತ್ತಿ ತೋರಿಸುವುದಲ್ಲ, ಅದನ್ನು ಸುಲಭವಾಗಿ ಮಾಡಬಹುದಿತ್ತು. ಬದಲಾಗಿ, ಇದು ತಳಮಟ್ಟದ ಬದಲಾವಣೆ ಮಾಡುವವರ ಸಾಮೂಹಿಕ ಪ್ರಯತ್ನಗಳ ಬಗ್ಗೆ ಆಗಿದೆ.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಹಲವು ದಿನಗಳ ಕಾಲ ಧೈರ್ಯದಿಂದ ಸಾವಿನೊಂದಿಗೆ ಹೋರಾಡಿದರು. ಆದರೆ, ದುರದೃಷ್ಟವಶಾತ್ ಅವರು ನಿಧನರಾದರು. ಆಗಸ್ಟ್ 2021 ರಲ್ಲಿ ಅವರಿಗೆ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಯಿತು ಎಂದು ಹೇಳಿದರು. ಇದೇ ವೇಳೆ ಶಾಲೆಯ ಪ್ರಾಂಶುಪಾಲರಿಗೆ ವರುಣ್ ಬರೆದ ಪತ್ರವನ್ನೂ ಮೋದಿ ಉಲ್ಲೇಖಿಸಿದರು.

ಮುಂದಿನ ಮನ್ ಕೀ ಬಾತ್ 2022ರಲ್ಲಿ ನಡೆಯಲಿದೆ. ನಾವು ಹೊಸ ಕೆಲಸಗಳನ್ನು ಮಾಡೋಣ ಮತ್ತು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಭಾರತೀಯರ ಸಬಲೀಕರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ ಎಂದು ಹೇಳಿದ್ದಾರೆ.

ಬಳಿಕ ಓಮಿಕ್ರಾನ್ ಕುರಿತು ಮಾತನಾಡಿದ ಅವರು,  ಹೊಸ ಕೊವಿಡ್ -19 ರೂಪಾಂತರವಾಗಿ ಓಮಿಕ್ರಾನ್ ಭಾರತವನ್ನು ಪ್ರವೇಶಿಸುತ್ತಿದ್ದಂತೆ, ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಎಲ್ಲಾ ಸಮಯದಲ್ಲೂ ಕೊವಿಡ್ -19-ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿರಬೇಕು. ಹೊಸ ವರ್ಷಕ್ಕೆ ನಾವು ಸಿದ್ಧರಾಗಿರುವಾಗ ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಬೇಕು. ಕೋವಿಡ್ 19 ಒಮಿಕ್ರಾನ್ ನ ಹೊಸ ರೂಪಾಂತರವು ನಮ್ಮ ಬಾಗಿಲುಗಳನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ವಿಜ್ಞಾನಿಗಳು ಹೊಸ ಒಮಿಕ್ರಾನ್ ರೂಪಾಂತರವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಪ್ರತಿದಿನ ಅವರು ಹೊಸ ಡೇಟಾವನ್ನು ಪಡೆಯುತ್ತಿದ್ದಾರೆ, ಅವರ ಸಲಹೆಗಳಿಂದ ಕೆಲಸ ಮಾಡಲಾಗುತ್ತಿದೆ. ಅಂತಹ ಸಂದರ್ಭದಲ್ಲಿ, ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಕೋವಿಡ್ ವಿರುದ್ಧದ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿ ಮಾತ್ರ ಕೋವಿಡ್ ಸೋಂಕನ್ನು ಸೋಲಿಸುತ್ತದೆ. ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ನಾವು 2022ಕ್ಕೆ ಪ್ರವೇಶಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾತನಾಡಿದ ಮೋದಿ ಸ್ಕ್ರೀನ್ ಟೈಂ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದರು. 2021ರಲ್ಲಿ ನೀವು ಓದಿದ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಮೋದಿ ಕರೆ ನೀಡಿದರು. ಇತರರು 2022ರಲ್ಲಿ ಪುಸ್ತಕಗಳನ್ನು ಓದಲು ನೀವು ಸಹಾಯ ಮಾಡುತ್ತೀರಿ ಎಂಬ ಭರವಸೆ ಇದೆ ಎಂದರು.

ಇಂದು ಭಾರತೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ. ವಿವಿಧ ರಾಷ್ಟ್ರಗಳ ಜನರು ಕೇವಲ ಕಲಿಯಲು ಆಸಕ್ತಿ ಹೊಂದಿರುವುದಿಲ್ಲ ಆದರೆ ಅದನ್ನು ಮತ್ತಷ್ಟು ಉತ್ತೇಜಿಸಲು ಸಹಾಯ ಮಾಡುತ್ತಿದ್ದಾರೆ.

‘SAAF-Water’ ಎಂಬುದು ಒಂದು ಸ್ಟಾರ್ಟಪ್ ಆಗಿದ್ದು, ಜನರಿಗೆ ಕೃತಕ ಬುದ್ಧಿಮತ್ತೆ ಮತ್ತು IoT Internet of Things) ಸಹಾಯದಿಂದ ಶುದ್ಧ ಕುಡಿಯುವ ನೀರನ್ನು ನಕ್ಷೆ ಮಾಡಲು ಮತ್ತು ಗುರುತಿಸಲು ಸಹಾಯ ಮಾಡುತ್ತಿದೆ, ಇದು ತಂತ್ರಜ್ಞಾನದ ಸಹಾಯದಿಂದ ಜನರಿಗೆ ಶುದ್ಧ ನೀರನ್ನು ಕುಡಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com