ಗೋವಾದಲ್ಲಿ ಓಮೈಕ್ರಾನ್ ಮೊದಲ ಪ್ರಕರಣ ಪತ್ತೆ, ಬ್ರಿಟನ್ ನಿಂದ ಬಂದ 8 ವರ್ಷದ ಬಾಲಕನಿಗೆ ಸೋಂಕು

ಹೊಸ ವರ್ಷಾಚರಣೆಗಾಗಿ ಮದಿರೆಯ ಸ್ವರ್ಗ ಅನ್ನೋ ಗೋವಾಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವುದರ ನಡುವೆಯೇ ಕರಾವಳಿ ರಾಜ್ಯದಲ್ಲಿ ಓಮೈಕ್ರಾನ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಎಂಟು ವರ್ಷದ ಬಾಲಕನಿಗೆ ಕೋವಿಡ್ ಹೊಸ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಣಜಿ: ಹೊಸ ವರ್ಷಾಚರಣೆಗಾಗಿ ಮದಿರೆಯ ಸ್ವರ್ಗ ಅನ್ನೋ ಗೋವಾಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವುದರ ನಡುವೆಯೇ ಕರಾವಳಿ ರಾಜ್ಯದಲ್ಲಿ ಓಮೈಕ್ರಾನ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಎಂಟು ವರ್ಷದ ಬಾಲಕನಿಗೆ ಕೋವಿಡ್ ಹೊಸ ರೂಪಾಂತರಿ ಸೋಂಕು ತಗುಲಿದೆ.

ಕಳೆದ ಡಿಸೆಂಬರ್ 17 ರಂದು ಯುಕೆಯಿಂದ ಗೋವಾಗೆ ಪ್ರಯಾಣಿಸಿದ ಬಾಲಕನಿಗೆ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ ಪಡೆದ ಪರೀಕ್ಷಾ ವರದಿಯಲ್ಲಿ ಓಮೈಕ್ರಾನ್ ಪಾಸಿಟಿವ್ ದೃಢಪಟ್ಟಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ರೋಟೋಕಾಲ್ ಪ್ರಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅಗತ್ಯವಿರುವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಣೆ ಹೇಳಿದ್ದಾರೆ.

ಗೋವಾ ಸರ್ಕಾರವೂ ಕೋವಿಡ್ ನಿಯಮಾವಳಿಗಳನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿದೆ. ಅನ್ಯ ರಾಜ್ಯಗಳಿಂದ, ವಿದೇಶಗಳಿಂದ ಬರುವ ಪ್ರವಾಸಿಗರನ್ನು ತಪಾಸಣೆಗೆ ಗುರಿಪಡಿಸಲಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಆರ್.ಟಿ.ಪಿ.ಸಿ.ಆರ್, ಡಬಲ್ ಡೋಸ್ ರಿಪೋರ್ಟ್ ನ್ನು ತಲಾಶ್ ಮಾಡುತ್ತಿದ್ದಾರೆ. ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ್ರೂ ಸಹ ನೂತನ ಓಮೈಕ್ರಾನ್ ಗೋವಾದಲ್ಲಿ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com