ಗ್ರಂಥಾಲಯ ಸ್ಥಾಪಕ ಹಿರಿಯ ವ್ಯಕ್ತಿಗೆ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಗೌರವ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ

ಇತ್ತೀಚಿಗಷ್ಟೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡಪ್ರಭ ಡಾಟ್ ಕಾಂ ಕುರೆಳ್ಳ ವಿಟ್ಠಲಾಚಾರ್ಯ ಕುರಿತು ಲೇಖನವನ್ನು ಪ್ರಕಟಿಸಿತ್ತು ಎನ್ನುವುದು ಗಮನಾರ್ಹ.
ಡಾ. ಕುರೆಳ್ಳ ವಿಟ್ಠಲಾಚಾರ್ಯ
ಡಾ. ಕುರೆಳ್ಳ ವಿಟ್ಠಲಾಚಾರ್ಯ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತೆಲಂಗಾಣದ ಹಿರಿಯ ಕವಿ, ಗ್ರಂಥಾಲಯ ಸ್ಥಾಪಕ ಡಾ. ಕುರೆಳ್ಳ ವಿಟ್ಠಲಾಚಾರ್ಯ  ಅವರ ಸಾಧನೆ ಕುರಿತು ಪ್ರಸ್ತಾಪಿಸಿ ಗೌರವ ಸಲ್ಲಿಸಿದ್ದಾರೆ.

ಇತ್ತೀಚಿಗಷ್ಟೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡಪ್ರಭ ಡಾಟ್ ಕಾಂ ಕುರೆಳ್ಳ ವಿಟ್ಠಲಾಚಾರ್ಯ ಕುರಿತು ಲೇಖನವನ್ನು ಪ್ರಕಟಿಸಿತ್ತು ಎನ್ನುವುದು ಗಮನಾರ್ಹ.

ಡಾ. ಕುರೆಳ್ಳ ವಿಟ್ಠಲಾಚಾರ್ಯ ಅವರು ಬಾಲ್ಯದಿಂದಲೇ ಗ್ರಂಥಾಲಯ ಸ್ಥಾಪನೆಯ ಕನಸನ್ನು ಹೊತ್ತಿದ್ದರು. ಆ ಕನಸನ್ನು ಈ ಇಳಿ ವಯಸ್ಸಲ್ಲಿ ಸಾಕಾರ ಮಾಡಿಕೊಂಡಿದ್ದಾರೆ. ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ ಎಂದು ಮೋದಿ ಶ್ಲಾಘಿಸಿದ್ದಾರೆ.

ಬಾಲಕನಾಗಿದ್ದಾಗ ವಿಟ್ಠಲಾಚಾರ್ಯ ಅವರ ಬಳಿ ಪುಸ್ತಕ ಕೊಳ್ಳಲು ದುಡ್ಡು ಇರುತ್ತಿರಲಿಲ್ಲ. ಆಗ ಅವರಂತೆ ಪುಸ್ತಕ ಓದಲಾಗದವರಿಗೆ ಉಚಿತವಾಗಿ ಪುಸ್ತಕ ಓದಲು ಅನುವು ಮಾಡಿಕೊಡುವ ಸಲುವಾಗಿ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂದು ಕನಸು ಕಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com