ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ: ಭಾರತೀಯ ರಾಜತಾಂತ್ರಿಕನಿಗೆ ಇಮ್ರಾನ್ ಖಾನ್ ಸರ್ಕಾರ ಸಮನ್ಸ್

ಈ ಹಿಂದೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹರಿದ್ವಾರದ ಧರ್ಮ ಸಂಸದ್ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳು ಮಾಡಲ್ಪಟ್ಟಿರುವುದಾಗಿ ಆರೋಪಿಸಿರುವ ಪಾಕಿಸ್ತಾನ ಈ ಸಂಬಂಧ ಇಸ್ಲಾಮಾಬಾದಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಧರ್ಮ ಸಂಸದ್ ಅಧಿವೇಶನದಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲಬೇಕು ಎನ್ನುವ ಅರ್ಥದಲ್ಲಿ ಭಾಷಣಗಳನ್ನು ನೀಡಲಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆಘಾತ ತಂದಿದೆ ಎಂದು ಪಾಕ್ ಅಭಿಪ್ರಾಯಪಟ್ಟಿದೆ. 

ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವ ಚಟುವಟಿಕೆಗಳನ್ನು ನಿರ್ಬಂಧಿಸುವ ಜವಾಬ್ದಾರಿ ಭಾರತದ ಮೇಲಿದೆ, ಮುಂದಿನ ದಿನಗಳಲ್ಲಿ ಈ ಬಗೆಯ ಘಟನೆಗಳು ನಡೆಯದಂತೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದಿದೆ ಇಮ್ರಾನ್ ಸರ್ಕಾರ.

ಈ ಹಿಂದೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹರಿದ್ವಾರದ ಧರ್ಮ ಸಂಸದ್ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದವು. ಅಧಿವೇಶನದಲ್ಲಿ ಕೋಮು ಪ್ರಚೋದಕ ಭಾಷಣ ನೀಡಿದ ಜಿತೇಂದ್ರ ನಿತ್ಯಾನಂದ ತ್ಯಾಗಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com