ಸರ್ಕಾರ ಉಳಿಸಿ ಎಂದವರೇ ಎರಡು ಕೈಯಲ್ಲಿ ಲೂಟಿ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ

ಉತ್ತರಾಖಂಡ ರಾಜ್ಯ ರಚನೆಯಾಗಿ 20 ವರ್ಷಗಳು ಪೂರೈಸಿದೆ. ಈ ವರ್ಷಗಳಲ್ಲಿ ನೀವು ಉತ್ತರಾಖಂಡವನ್ನು ಲೂಟಿ ಮಾಡಬಹುದು, ಆದರೆ ನನ್ನ ಸರ್ಕಾರವನ್ನು ಉಳಿಸಿ ಎಂದು ಬೇಡುತ್ತಿದ್ದ ಜನರೇ ಉತ್ತರಾಖಂಡವನ್ನು ಎರಡೂ ಕೈಗಳಿಂದ ಲೂಟಿ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಹಲ್ದ್ವಾನಿ: ಉತ್ತರಾಖಂಡ ರಾಜ್ಯ ರಚನೆಯಾಗಿ 20 ವರ್ಷಗಳು ಪೂರೈಸಿದೆ. ಈ ವರ್ಷಗಳಲ್ಲಿ ನೀವು ಉತ್ತರಾಖಂಡವನ್ನು ಲೂಟಿ ಮಾಡಬಹುದು, ಆದರೆ ನನ್ನ ಸರ್ಕಾರವನ್ನು ಉಳಿಸಿ ಎಂದು ಬೇಡುತ್ತಿದ್ದ ಜನರೇ ಉತ್ತರಾಖಂಡವನ್ನು ಎರಡೂ ಕೈಗಳಿಂದ ಲೂಟಿ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಹಲ್ದ್ವಾನಿಯಲ್ಲಿ 17,500 ಕೋಟಿ ರೂ ವೆಚ್ಚದ ಒಟ್ಟು 23 ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿ, ಬಿಜೆಪಿ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಆದರೆ ಕೆಲವರು ಇಲ್ಲಸಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ತಮ್ಮ ವಿರೋಧ ಪಕ್ಷದ ಸತ್ಯ ತಿಳಿದ ನಂತರ, ಈ ಜನರು ವದಂತಿಗಳನ್ನು ಹರಡುವ ಹೊಸ ವ್ಯವಹಾರ ಪ್ರಾರಂಭಿಸಿದ್ದಾರೆ, ಅದನ್ನು ತಯಾರಿಸಿ, ಹರಡಿ, ನಂತರ ಕಿರುಚುತ್ತಾರೆ. ಈ ಉತ್ತರಾಖಂಡದ ಬಂಡುಕೋರರು ತನಕ್‍ಪುರ-ಬಾಗೇಶ್ವರ್ ರೈಲು ಮಾರ್ಗದ ಬಗ್ಗೆಯೂ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಉದ್ಘಾಟನೆಗೊಂಡ ಅಭಿವೃದ್ಧಿ ಯೋಜನೆಗಳು ಹಲ್ದ್ವಾನಿಯ ಜನರಿಗೆ ಉತ್ತಮ ಸಂಪರ್ಕ ಮತ್ತು ಆರೋಗ್ಯವನ್ನು ಒದಗಿಸಲಿವೆ. ನೀರು, ಚರಂಡಿ, ರಸ್ತೆ, ಪಾರ್ಕಿಂಗ್, ಬೀದಿ ದೀಪಗಳಿಗಾಗಿ ಹಲ್ದ್ವಾನಿಯ ಒಟ್ಟಾರೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಯೋಜನೆಯನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಎರಡನೇ ಭೇಟಿ ಇದಾಗಿದೆ. ಡಿಸೆಂಬರ್ 4 ರಂದು ಉತ್ತರಾಖಂಡಕ್ಕೆ ಭೇಟಿ ನೀಡಿದ ಮೋದಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುವುದರ ಜೊತೆಗೆ ಡೆಹ್ರಾಡೂನ್‍ನಲ್ಲಿ 18,000 ಕೋಟಿ ರೂ.ಗಳ ಯೋಜನೆಗಳನ್ನು ಅನಾವರಣಗೊಳಿಸಿದ್ದರು.

ಯಾವ ಯಾವ ಯೋಜನೆಗಳು?
5,747 ಕೋಟಿ ರೂಪಾಯಿ ಮೌಲ್ಯದ ಲಖ್ವಾರ್ ಬಹುಪಯೋಗಿ ಜಲವಿದ್ಯುತ್ ಯೋಜನೆ, 500 ಕೋಟಿ ರೂಪಾಯಿ ಮೌಲ್ಯದ ಉಧಮ್ ಸಿಂಗ್ ನಗರದಲ್ಲಿ ಏಮ್ಸ್ ಋಷಿಕೇಶ ಉಪಗ್ರಹ ಕೇಂದ್ರ, ಮೊರಾದಾಬಾದ್-ಕಾಶಿಪುರ ನಾಲ್ಕು ಲೇನ್ ರಸ್ತೆ, ಪಿಥೋರಗಢ್‍ನಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜು ನೇಪಾಳದೊಂದಿಗೆ ಸುಧಾರಿತ ರಸ್ತೆ ಸಂಪರ್ಕ ಮತ್ತು ಕಾಶಿಪುರದ ಅರೋಮಾ ಪಾರ್ಕ್ ಪ್ರಮುಖ ಯೋಜನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com