ಉಚಿತ ಓಮಿಕ್ರಾನ್ ಪರೀಕ್ಷೆ?: ಅದೊಂದು ಹಗರಣ- ಗೃಹ ಸಚಿವಾಲಯ ಎಚ್ಚರಿಕೆ

ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಹಲವು ಸಲಹೆಗಳನ್ನು ಪ್ರಕಟಿಸಿದೆ. 
ಕೇಂದ್ರ ಗೃಹ ಸಚಿವಾಲಯ
ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಹಲವು ಸಲಹೆಗಳನ್ನು ಪ್ರಕಟಿಸಿದೆ. 

ಸೈಬರ್ ಕ್ರಿಮಿನಲ್ ಗಳು ಉಚಿತವಾಗಿ ಕೋವಿಡ್-19 ರೂಪಾಂತರಿಯನ್ನು ಪತ್ತೆ ಪರೀಕ್ಷೆ ಮಾಡುವುದಾಗಿ ಆಮಿಷವೊಡ್ಡುತ್ತಾರೆ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಗೃಹ ಇಲಾಖೆ ಹೇಳಿದೆ. 

ಗೃಹ ಸಚಿವಾಲಯದ ಮಾಹಿತಿ ಭದ್ರತಾ ವಿಭಾಗ ಈ ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಸೈಬರ್ ರಕ್ಷಣೆಗಳಿಗಿಂತಲೂ ಆರೋಗ್ಯ ಬಿಕ್ಕಟ್ಟಿನತ್ತ ಗಮನ ಹೆಚ್ಚಾಗಿರುವುದರ ಲಾಭವನ್ನು ಪಡೆಯಲು ಯತ್ನಿಸುತ್ತಿದೆ. ಜನರನ್ನು ವಂಚಿಸುವುದಕ್ಕೆ ಸೈಬರ್ ಕ್ರಿಮಿನಲ್ ಗಳು ಹೊಸ ವಿಧಾನ, ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಓಮಿಕ್ರಾನ್ ರೂಪಾಂತರಿಯ ಹೆಸರಿನಲ್ಲಿ ಸೈಬರ್ ಕ್ರೈಮ್ ಗಳು ನಡೆಯುತ್ತಿರುವ ಪ್ರಕರಣಗಳು ಪ್ರತಿದಿನವೂ ಹೆಚ್ಚಳವಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ. 

ವಂಚಕರು ಓಮಿಕ್ರಾನ್ ಸೋಂಕು ಪತ್ತೆಗಾಗಿ ಪಿಸಿಆರ್ ಪರೀಕ್ಷೆಗಳ ಕುರಿತು ಇ-ಮೇಲ್ ಕಳಿಸಲಾರಂಭಿಸಿದ್ದಾರೆ. ಈ  ಮೇಲ್ ನಲ್ಲಿರುವ ಲಿಂಕ್ ಗಳಲ್ಲಿ  ದುರುದ್ದೇಶಪೂರಿತ ಲಿಂಕ್‌ಗಳು ಮತ್ತು ದುರುದ್ದೇಶಪೂರಿತ ಫೈಲ್‌ಗಳು ಇರಲಿವೆ. 

ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಅಂಶಗಳನ್ನು ನಕಲು ಮಾಡುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಎಚ್ಚರಿಸಿದೆ. ವೆಬ್ ಸೈಟ್ ಗಳನ್ನು ಪರಿಶೀಲಿಸಬೇಕು, ಸೈಬರ್ ಅಪರಾಧಗಳು ಕಂಡುಬಂದಲ್ಲಿ ಸರ್ಕಾರದ ಸೈಬರ್ ಕ್ರೈಮ್ ಪೋರ್ಟಲ್ ಗೆ ವರದಿ ಮಾಡಬೇಕು ಎಂದು ಸಚಿವಾಲಯ ಮನವಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com