ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ: ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ವರ್ಷಾಂತ್ಯಕ್ಕೆ ತಮಿಳು ನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿವೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳು ಇಂದು ಶುಕ್ರವಾರ ಚೆನ್ನೈ, ತಿರುವಲ್ಲೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮುಚ್ಚಿವೆ. 
ಚೆನ್ನೈಯ ಸೈದಪೇಟೆಯಲ್ಲಿ ತುಂಬಿ ಹರಿಯುತ್ತಿರುವ ನೀರು
ಚೆನ್ನೈಯ ಸೈದಪೇಟೆಯಲ್ಲಿ ತುಂಬಿ ಹರಿಯುತ್ತಿರುವ ನೀರು

ಚೆನ್ನೈ: ವರ್ಷಾಂತ್ಯಕ್ಕೆ ತಮಿಳು ನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿವೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳು ಇಂದು ಶುಕ್ರವಾರ ಚೆನ್ನೈ, ತಿರುವಲ್ಲೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮುಚ್ಚಿವೆ. 

ಈ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸತತ ಧಾರಾಕಾರ ಮಳೆಗೆ ಚೆನ್ನೈ ನಗರದ ಹಲವು ಕಡೆಗಳಲ್ಲಿ ಹಾನಿಯುಂಟಾಗಿದ್ದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕಳೆದ ರಾತ್ರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ಕಾರ್ಯಗಳು ಪೂನಮಲ್ಲಿ ಹೈ ರೋಡ್ ಮತ್ತು ಪ್ಯಾರಿಸ್ ಕಾರ್ನರ್ ಸೇರಿದಂತೆ ಕೆಲವು ಸ್ಥಳಗಳಲ್ಲಿ ನಿಂತ ಮಳೆ ನೀರನ್ನು ತೆರವು ಮಾಡುವ ಕೆಲಸಗಳನ್ನು ತ್ವರಿತಗೊಳಿಸಿದರು.

ರಿಪ್ಪನ್ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಪಾಲಿಕೆ ಆಯುಕ್ತ ಗಗನ್‌ದೀಪ್ ಸಿಂಗ್ ಬೇಡಿ ಅವರೊಂದಿಗೆ ಚರ್ಚೆ ನಡೆಸಿದರು. ಭೇಟಿ ವೇಳೆ ಸಚಿವರಾದ ಪಿ ಕೆ ಸೇಕರ್ ಬಾಬು ಮತ್ತು ವಿ ಸೆಂಥಿಲ್ ಬಾಲಾಜಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ, ಕಂದಾಯ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಗುರುವಾರ ರಾತ್ರಿ ಮಳೆ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಮಳೆಯ ನಂತರ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಚೆನ್ನೈನ ಎಲ್ಲಾ ಭಾಗಗಳಲ್ಲಿ ನಿಂತ ನೀರು ತೆರವು ಕಾರ್ಯ ಭರದಿಂದ ಸಾಗುತ್ತಿದೆ ಎಂದರು.

ಈ ಮಧ್ಯೆ, ಭಾರೀ ಒಳಹರಿವಿನಿಂದಾಗಿ, ಚೆಂಬರಂಬಾಕ್ಕಂ ಪ್ರದೇಶದಲ್ಲಿ 19 ಸೆಂ.ಮೀ ಮಳೆಯಾಗಿದೆ. ಇದರ ಪರಿಣಾಮವಾಗಿ, ಚೆಂಬರಂಬಾಕ್ಕಂ ಸರೋವರದ ಸಂಗ್ರಹದ ಮಟ್ಟವು ಶೇಕಡಾ 98ರಷ್ಟು ಏರಿಕೆಯಾಗಿದೆ. ಒಳ ಹರಿವು 2 ಸಾವಿರದ 900 ಕ್ಯುಸೆಕ್ ಇದ್ದು, ಹೊರ ಹರಿವು ಸಾವಿರ ಕ್ಯೂಸೆಕ್ ಇದೆ.

ಚೆನ್ನೈನ ವಿವಿಧೆಡೆ ಮಳೆ ಪ್ರಮಾಣ ಇಂತಿದೆ: ಎಂಆರ್ ಸಿ ನಗರ - 21 ಸೆಂ.ಮೀ; ನುಗಂಬಕ್ಕಂ - 20 ಸೆಂ; ನಂದನಂ - 19 ಸೆಂ; ಪೂನಮಲ್ಲಿ - 19 ಸೆಂ ಮತ್ತು ಮೀನಂಬಾಕ್ಕಂ - 15 ಸೆಂ.ಮೀ.

ಚೆನ್ನೈಯ ನಾಲ್ಕು ಸುರಂಗ ಮಾರ್ಗಗಳು - ದುರೈಸಾಮಿ ಸಬ್‌ವೇ, ಆರ್‌ಬಿಐ ಸಬ್‌ವೇ, ಮ್ಯಾಡ್ಲಿ ರೋಡ್ ರೋಡ್ ಮತ್ತು ರಂಗಜಪುರಂ ದ್ವಿಚಕ್ರ ವಾಹನ ಸುರಂಗಮಾರ್ಗ ನೀರು ನಿಂತ ಕಾರಣ ಮುಚ್ಚಲಾಗಿದೆ. ಕೆ.ಕೆ.ನಗರ-ರಾಜಮನ್ನಾರ್ ರಸ್ತೆ, ಮೈಲಾಪುರ-ಶಿವಸ್ವಾಮಿ ರಸ್ತೆ, ಇವಿಆರ್ ರಸ್ತೆ- ಅಪೋಲೋ ಆಸ್ಪತ್ರೆ ಜಂಕ್ಷನ್, ಅಳಗಪ್ಪ ರಸ್ತೆ, ಅಣ್ಣಾ ರೋಟರಿ ಸರ್ವೀಸ್ ರಸ್ತೆ, ಕೆ.ಪಿ.ದಾಸನ್ ರಸ್ತೆ, ಟಿಟಿಕೆ ಫಸ್ಟ್ ಕ್ರಾಸ್ ಸ್ಟ್ರೀಟ್, ತಿರುಮಲೈ ಪಿಳ್ಳೈ ರಸ್ತೆ ಮುಂತಾದ ಕಡೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. , ಪ್ರಕಾಶಂ ರಸ್ತೆ, ವಿನಾಯಕಪುರಂ ಜಂಕ್ಷನ್, ನಜರತ್‌ಪೇಟೆ, ಜವಾಹರ್ ನಗರದಲ್ಲಿ 70 ಅಡಿ ರಸ್ತೆ. ಚೆನ್ನೈಗೆ ಸಂಚಾರ ಬದಲಾವಣೆಯಲ್ಲಿ ವ್ಯತ್ಯಾಸವಿಲ್ಲ. 

ಕಾಂಚೀಪುರಂ ಜಿಲ್ಲೆಯ ಮಂಗಾಡು ಜನನಿ ನಗರ, ಮಲಯಂಪಕ್ಕಂ ಶಕ್ತಿ ನಗರ, ಶ್ರೀನಿವಾಸ ನಗರದಲ್ಲಿ ನೀರು ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com