ರೈಲ್ವೆ ಸಚಿವಾಲಯದಿಂದ ನಾಲ್ಕು ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ ಪ್ರಸ್ತಾಪ ಸಾಧ್ಯತೆ

ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಗುವಾಹಟಿ, ಜಮ್ಮು ಮತ್ತು ಪಾಟ್ನಾದಂತಹ ಹೆಚ್ಚಿನ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ರೈಲ್ವೆ ಸಚಿವಾಲಯ 2022ರಲ್ಲಿ ರಾಷ್ಟ್ರೀಯ ರೈಲು ಯೋಜನೆಯಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಗುವಾಹಟಿ, ಜಮ್ಮು ಮತ್ತು ಪಾಟ್ನಾದಂತಹ ಹೆಚ್ಚಿನ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ರೈಲ್ವೆ ಸಚಿವಾಲಯ 2022ರಲ್ಲಿ ರಾಷ್ಟ್ರೀಯ ರೈಲು ಯೋಜನೆಯಡಿ ನಾಲ್ಕು ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ರಚಿಸುವ ಪ್ರಸ್ತಾವನೆ ಸಲ್ಲಿಸಲಿದೆ.

ಸದ್ಯಕ್ಕೆ, ರೈಲ್ವೆ ಸಚಿವಾಲಯ ಈಗಾಗಲೇ ಎಂಟು ಬುಲೆಟ್ ಟ್ರೈನ್ ಕಾರಿಡಾರ್‌ಗಳಲ್ಲಿ ಕೆಲಸ ಮಾಡುತ್ತಿದೆ, ಇದರಲ್ಲಿ ಮೊದಲನೆಯದು ಮುಂಬೈ ಮತ್ತು ಅಹಮದಾಬಾದ್ ನಡುವೆ.

ಈಗ ಹೊಸದಾಗಿ 618 ಕಿಮೀ ಉದ್ದದ ಹೈದರಾಬಾದ್ - ಬೆಂಗಳೂರು, 855 ಕಿಮೀ ಉದ್ದದ ನಾಗ್ಪುರ - ವಾರಣಾಸಿ, 850 ಕಿಮೀ ಉದ್ದದ ಪಾಟ್ನಾ-ಗುವಾಹಟಿ ಮತ್ತು 190 ಕಿಮೀ ಉದ್ದದ ಅಮೃತಸರ-ಪಠಾಣ್‌ಕೋಟ್-ಜಮ್ಮು ಹೈಸ್ಪೀಡ್ ರೈಲು ಕಾರಿಡಾರ್‌ಗಳ ಬಗ್ಗೆ ರೈಲ್ವೆ ಸಚಿವಾಲಯ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ರೈಲ್ವೇ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ವಾಸ್ತವವಾಗಿ, 2022 ರಲ್ಲಿ ರಾಷ್ಟ್ರೀಯ ರೈಲು ಯೋಜನೆ ಅಡಿ ರೈಲ್ವೇ ಸಚಿವಾಲಯವು ದೇಶದ ಎಲ್ಲಾ ಪ್ರಮುಖ ನಗರಗಳನ್ನು ಹೈಸ್ಪೀಡ್ ರೈಲು ಸಂಪರ್ಕದೊಂದಿಗೆ ಸಂಪರ್ಕಿಸುವ ಬಗ್ಗೆ ಯೋಚಿಸುತ್ತಿದೆ.

ಮಂಜೂರಾದ ಮತ್ತು ಉದ್ದೇಶಿತ ಹೈಸ್ಪೀಡ್ ರೈಲು ಕಾರಿಡಾರ್‌ಗಳು ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ರೈಲು ಹಳಿಗಳ ಎರಡೂ ಬದಿಗಳಲ್ಲಿ ಸುಂದರವಾದ ಹಸಿರು ಇರಲಿದೆ ಎಂದು ಮೂಲಗಳು ತಿಳಿಸಿವೆ.

2022ರಲ್ಲಿ ರೇಲ್ವೆ ಸಚಿವಾಲಯ ನಾಲ್ಕು ಹೊಸ ಕಾರಿಡಾರ್‌ಗಳ ಪ್ರಸ್ತಾವನೆ ಸಲ್ಲಿಸಿದ ನಂತರ ಹೈ ಸ್ಪೀಡ್ ರೈಲ್ ಕಾರಿಡಾರ್‌ಗಳ ಒಟ್ಟು ಸಂಖ್ಯೆ 8 ರಿಂದ 12 ಕ್ಕೆ ಏರಿಕೆಯಾಗಲಿದೆ.

ಏತನ್ಮಧ್ಯೆ, ಮುಂಬೈ - ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್‌ ನಂತರ, ಅನುಮೋದಿತ ದೆಹಲಿ - ವಾರಣಾಸಿ, ದೆಹಲಿ - ಅಹಮದಾಬಾದ್, ಮುಂಬೈ - ನಾಗ್ಪುರ, ದೆಹಲಿ - ಅಮೃತಸರ, ಮುಂಬೈ - ಹೈದರಾಬಾದ್ ಮತ್ತು ಚೆನ್ನೈ - ಮೈಸೂರು ಕುರಿತು ವಿವರವಾದ ಯೋಜನಾ ವರದಿಯನ್ನು(ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com