2020 ರ ಆಕ್ಸ್‌ಫರ್ಡ್ ಹಿಂದಿ ಪದವಾಗಿ 'ಆತ್ಮನಿರ್ಭರತಾ' ಆಯ್ಕೆ

ಸ್ವಾವಲಂಬನೆಯನ್ನು ಗುರುತಿಸುವ 'ಆತ್ಮನಿರ್ಭರತಾ' ಎಂಬ ಪದ ಆಕ್ಸ್‌ಫರ್ಡ್ ಭಾಷಾ ನಿಘಂಟಿನ 2020 ರ ಹಿಂದಿ ಪದವೆಂದು ಗುರುತಿಸಲ್ಪಟ್ಟಿದೆ.

Published: 02nd February 2021 12:15 PM  |   Last Updated: 02nd February 2021 12:44 PM   |  A+A-


ನರೇಂದ್ರ ಮೋದಿ

Posted By : Raghavendra Adiga
Source : PTI

ನವದೆಹಲಿ: ಸ್ವಾವಲಂಬನೆಯನ್ನು ಗುರುತಿಸುವ 'ಆತ್ಮನಿರ್ಭರತಾ' ಎಂಬ ಪದ ಆಕ್ಸ್‌ಫರ್ಡ್ ಭಾಷಾ ನಿಘಂಟಿನ 2020 ರ ಹಿಂದಿ ಪದವೆಂದು ಗುರುತಿಸಲ್ಪಟ್ಟಿದೆ. ಏಕೆಂದರೆ ಇದು "ಸಾಂಕ್ರಾಮಿಕ ರೋಗಗಳ ಅಪಾಯಗಳನ್ನು ನಿಭಾಯಿಸಿದ ಮತ್ತು ರೋಗದಿಂದ ಗುಣಹೊಂದಿದ  ಅಸಂಖ್ಯಾತ ಭಾರತೀಯರ ದಿನನಿತ್ಯದ ಸಾಧನೆಗಳ ಗುರುತಾಗಿದೆ".

ಭಾಷಾ ತಜ್ಞರಾದ ಕೃತಿಕಾ ಅಗ್ರವಾಲ್, ಪೂನಮ್ ನಿಗಮ್ ಸಹಾಯ್ ಮತ್ತು ಇಮೋಜನ್ ಫಾಕ್ಸೆಲ್ ಅವರ ಸಲಹಾ ಸಮಿತಿ ಈ ಪದವನ್ನು ಆಯ್ಕೆ ಮಾಡಿದೆ. ವರ್ಷದ ಆಕ್ಸ್‌ಫರ್ಡ್ ಹಿಂದಿ ಪದ ನಿಯತವಾದ ವಾರ್ಷಿಕ ನೀತಿ, ಮನಸ್ಥಿತಿ ಅಥವಾ ಮುನ್ಸೂಚನೆಗಳ ಪ್ರತಿಬಿಂಬಿಸಲು ಆಯ್ಕೆಮಾಡಿದ ಒಂದು ಪದ ಅಥವಾ ಅಭಿವ್ಯಕ್ತಿ, ಮತ್ತು ಸಾಂಸ್ಕೃತಿಕ ಮಹತ್ವದ ಪದವಾಗಿ ಶಾಶ್ವತ ಸ್ಥಾನ ಪಡೆದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಲ್ಲಿ ಭಾರತದ ಕೋವಿಡ್ ಚೇತರಿಕೆ ಪ್ಯಾಕೇಜ್ ಘೋಷಿಸುವಾಗ  'ಆತ್ಮನಿರ್ಭರತಾ'  ಪದ ಬಳಕೆ ಮಾಡಿದ್ದರು. ಒಂದು ದೇಶವಾಗಿ, ಆರ್ಥಿಕತೆಯಾಗಿ, ಸಮಾಜವಾಗಿ ಮತ್ತು ವ್ಯಕ್ತಿಗಳಾಗಿ ಸ್ವಾವಲಂಬಿಗಳಾಗುವ ಅಗತ್ಯವನ್ನು ಒತ್ತಿ ಹೇಳಿದ್ದರು, ಸಾಂಕ್ರಾಮಿಕದ ಅಪಾಯಗಳನ್ನು ನ್ಯಾವಿಗೇಟ್ ಮಾಡುವ ಪ್ರಯತ್ನ ಇದರ ಹಿಂದಿತ್ತು ಎಂದು ಆಕ್ಸ್‌ಫರ್ಡ್ ಹೇಳಿಕೆ ತಿಳಿಸಿದೆ.

ಪ್ರಧಾನಮಂತ್ರಿಯವರ ಭಾಷಣವನ್ನು ಅನುಸರಿಸಿ 'ಆತ್ಮನಿರ್ಭರತಾ' ಬಳಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು, ಭಾರತದ ಸಾರ್ವಜನಿಕ ನಿಘಂಟಿನಲ್ಲಿ ಒಂದು ನುಡಿಗಟ್ಟು ಮತ್ತು ಪರಿಕಲ್ಪನೆಯಾಗಿ ಅದರ ಪ್ರಾಮುಖ್ಯತೆ ಹೆಚ್ಚಿರುವುದನ್ನು ಎತ್ತಿ ತೋರಿಸಿದೆ ಎಂದು ಹೇಳಿಕೆ ವಿವರಿಸಿದೆ. ಇಡೀ ಆತ್ಮನಿರ್ಭರ ಭಾರತ ಅಭಿಯಾನದ ಅತ್ಯುತ್ತಮ ಯಶಸ್ಸಿನಲ್ಲಿ ಕೋವಿಡ್ ಲಸಿಕೆ ದೊಡ್ಡ ಪ್ರಮಾಣದಲ್ಲಿ ತಯಾರಿಸುವುದು. ಅಲ್ಲದೆ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ, ಜೈವಿಕ ತಂತ್ರಜ್ಞಾನ ಇಲಾಖೆ ಆತ್ಮನಿರ್ಭರ ಭಾರತ್ ಅಭಿಯಾನವನ್ನು ಎತ್ತಿ ತೋರಿಸಿದೆ. ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ರಾಜಪಥದಲ್ಲಿ ಅದು ತನ್ನ ಟ್ಯಾಬ್ಲೋದಲ್ಲಿ ಪ್ರದರ್ಶಿಸಿದೆ.

ಇದಕ್ಕೆ ಹಿಂದಿನ ವರ್ಷಗಳಲ್ಲಿ ಆಧಾರ್ (2017), ನಾರೀ ಶಕ್ತಿ(2018) ಮತ್ತು ಸಂವಿಧಾನ್ (2019). ವರ್ಷದ ಹಿಂದಿ ಪದ ಎಂದು ಆಯ್ಕೆಯಾಗಿದ್ದವು. ಆದರೆ ಹೀಗೆ ವರ್ಷದ ಹಿಂದಿ ಪದವಾಗಿ ಆಯ್ಕೆಯಾದ ಪದಗಳು ಸ್ವಯಂಚಾಲಿತವಾಗಿ ಯಾವುದೇ ಆಕ್ಸ್‌ಫರ್ಡ್ ನಿಘಂಟುಗಳಿಗೆ ಸೇರ್ಪಡೆಯಾಗಲಿದೆ ಎಂದು ಅರ್ಥವಲ್ಲ.
 

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp