ದೇಶಕ್ಕಾಗಿ ಬಜೆಟ್ ಇರಬೇಕೇ ಹೊರತು ಚುನಾವಣೆಗಾಗಿ ಅಲ್ಲ: 'ಮಹಾ' ಸಿಎಂ ಉದ್ಧವ್ ಠಾಕ್ರೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ಕೇಂದ್ರ ಬಜೆಟ್ 2021ನ್ನು ಚುನಾವಣಾ ಬಜೆಟ್ ಎಂದು ಟೀಕಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೇಶಕ್ಕಾಗಿ ಬಜೆಟ್ ಇರಬೇಕೇ ಹೊರತು ಚುನಾವಣೆಗಾಗಿ ಅಲ್ಲ ಎಂದು ಹೇಳಿದ್ದಾರೆ.
Published: 02nd February 2021 11:05 AM | Last Updated: 02nd February 2021 01:00 PM | A+A A-

ಉದ್ದವ್ ಠಾಕ್ರೆ
ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ಕೇಂದ್ರ ಬಜೆಟ್ 2021ನ್ನು ಚುನಾವಣಾ ಬಜೆಟ್ ಎಂದು ಟೀಕಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೇಶಕ್ಕಾಗಿ ಬಜೆಟ್ ಇರಬೇಕೇ ಹೊರತು ಚುನಾವಣೆಗಾಗಿ ಅಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, 'ಬಜೆಟ್‌ನಲ್ಲಿ ಇಡೀ ದೇಶದ ಬದಲಾಗಿ, ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳನ್ನು ಮಾತ್ರವೇ ಗಮನ ಹರಿಸಲಾಗಿದೆ. ಬಜೆಟ್ ಇಡೀ ದೇಶಕ್ಕಾಗಿ ಇರಬೇಕು. ಕೇವಲ ಚುನಾವಣೆಗಳಿಗಾಗಿ ಅಲ್ಲ. ಇದು ದೇಶದ ಬಜೆಟ್, ಚುನಾವಣೆಯದ್ದಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಇಡೀ ದೇಶದ ಗಮನ ಬಜೆಟ್ ಮೇಲಿರುತ್ತದೆ. ಎಲ್ಲ ಭಾಗದ ಜನರೂ ತಮ್ಮದೇ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಮಾತ್ರ ಕಣ್ಣಿಟ್ಟು, ಬಜೆಟ್ ರೂಪಿಸಿದರೆ ಇಡೀ ದೇಶದ ಜನರ ನಿರೀಕ್ಷೆಗಳು ಪೂರೈಕೆಯಾಗುವುದು ಹೇಗೆ? ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.