'ಹಗಲಲ್ಲಿ ಶ್ರೀರಾಮನ ಹೆಸರೇಳಿ ಸಂಗ್ರಹಿಸುವ ಹಣದಲ್ಲಿ ಬಿಜೆಪಿ ನಾಯಕರು ರಾತ್ರಿ ಹೊತ್ತು ಮದ್ಯ ಕುಡಿಯುತ್ತಾರೆ'

ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕಾಂತಿಲಾಲ್ ವಿವಾದ ಸೃಷ್ಟಿಸಿದ್ದಾರೆ.

Published: 03rd February 2021 09:20 AM  |   Last Updated: 03rd February 2021 12:51 PM   |  A+A-


kantilal bhuria

ಕಾಂತಿಲಾಲ್ ಭುರಿಯಾ

Posted By : Shilpa D
Source : Online Desk

ಭೋಪಾಲ್​: ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕಾಂತಿಲಾಲ್ ವಿವಾದ ಸೃಷ್ಟಿಸಿದ್ದಾರೆ.

ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ  ಕೋಟಿ ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಈ ನಾಯಕರು ಬೇರೇನೂ ಮಾಡುತ್ತಿಲ್ಲ. ಬೆಳಗ್ಗೆಯೆಲ್ಲ ಹಣ ಸಂಗ್ರಹ ಮಾಡಿ, ಅಂದೇ ರಾತ್ರಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಈ ಮೂಲಕ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರಾದ್ಯಂತ ಸುತ್ತುವರಿದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಆರ್​ಎಸ್​ಎಸ್​, ವಿಶ್ವ ಹಿಂದೂ ಪರಿಷತ್​ ಸೇರಿ ಹಲವು ವಿಶ್ವಾಸಾರ್ಹ ಸಂಘಟನೆಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ವಹಿಸಿದೆ. ಇದೀಗ ಇವರ ಕೆಲಸದ ಬಗ್ಗೆ ಕಾಂಗ್ರೆಸ್ ಶಾಸಕ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಮದ್ಯಕ್ಕಾಗಿಯೇ ಖಾಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂದು ಸಂಗ್ರಹ ಮಾಡಿದ ಹಣವೆಲ್ಲ ಅಂದೇ ಶ್ರೀರಾಮ ಮಂದಿರದ ಬ್ಯಾಂಕ್​ ಅಕೌಂಟ್​ಗೆ ಹೋಗುತ್ತಿದೆ ಎಂದು ಸ್ಪೀಕರ್​ ರಾಮೇಶ್ವರ್​ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp