83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಹೆಚ್ಎಎಲ್- ಕೇಂದ್ರ ಸರ್ಕಾರ ಒಪ್ಪಂದ: 48 ಸಾವಿರ ಕೋಟಿ ರೂ. ಯೋಜನೆ   

ಕೇಂದ್ರ ಸರ್ಕಾರ-ಹೆಚ್ಎಲ್ಎಲ್ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಫೆ.03 ರಂದು ಸಹಿ ಹಾಕಿವೆ. 

Published: 03rd February 2021 11:50 AM  |   Last Updated: 03rd February 2021 12:57 PM   |  A+A-


Tejas LCA

ತೇಜಸ್ ಲಘು ಯುದ್ಧ ವಿಮಾನ

Posted By : Srinivas Rao BV
Source : The New Indian Express

ಬೆಂಗಳೂರು: ಕೇಂದ್ರ ಸರ್ಕಾರ-ಹೆಚ್ಎಲ್ಎಲ್ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಫೆ.03 ರಂದು ಸಹಿ ಹಾಕಿವೆ. 48,000 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು,  ಏರೋ ಇಂಡಿಯಾ ಶೋ-2021 ರ ಮೊದಲ ದಿನ ಈ ಒಪ್ಪಂದ ನಡೆದಿದೆ.

ರಕ್ಷಣಾ ಸಚಿವಾಲಯದ ಪ್ರಧಾನ ನಿರ್ದೇಶಕ (ಖರೀದಿ ವಿಭಾಗ) ವಿಎಲ್ ಕಾಂತ ರಾವ್ ಹೆಚ್ಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಹಗೂ ಅಧ್ಯಕ್ಷ ಆರ್ ಮಾಧವನ್ ಏರೋ ಇಂಡಿಯಾ-2021 ರ ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

ಹೆಚ್ಎ ಎಲ್ ನಿರ್ಮಿತ ತೇಜಸ್ ಯುದ್ಧವಿಮಾನ ಏಕ ಇಂಜಿನ್  ಬಹು ಉಪಯೋಗಿ, ಸೂಪರ್ ಸೋನಿಕ್ ಫೈಟರ್ ವಿಮಾನವಾಗಿದ್ದು, ಪ್ರತಿಕೂಲ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಸದೀಯ ಸಮಿತಿ (ಸಿಸಿಎಸ್) 73 ತೇಜಸ್ Mk-IA ಆವೃತ್ತಿ ಹಾಗೂ 10 ಎಲ್ ಸಿಎ ತೇಜಸ್ Mk-I ಆವೃತ್ತಿಯ ತರಬೇತಿ ಯುದ್ಧ ವಿಮಾನಗಳನ್ನು ಹೆಚ್ಎಎಲ್ ನಿಂದ ಖರೀದಿಸಲು ಕಳೆದ ತಿಂಗಳು ಒಪ್ಪಿಗೆ ನೀಡಿತ್ತು. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp