ವಾಟ್ಸಪ್ ಪ್ರೈವಸಿ ಪಾಲಿಸಿ: ಪಿಐಎಲ್ ಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಿ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್

ವಾಟ್ಸಪ್ ಪ್ರೈವಸಿ ಪಾಲಿಸಿಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Published: 03rd February 2021 02:42 PM  |   Last Updated: 03rd February 2021 03:20 PM   |  A+A-


WhatsApp Will Stop Working on Nokia S40 Phones Today

ಈ ಸ್ಮಾರ್ಟ್ ಫೋನ್ ಗಳಲ್ಲಿ ಜ.1 ರಿಂದ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತ!

Posted By : Srinivasamurthy VN
Source : PTI

ನವದೆಹಲಿ: ವಾಟ್ಸಪ್ ಪ್ರೈವಸಿ ಪಾಲಿಸಿಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಈ ಸಂಬಂಧ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ವಾಟ್ಸಾಪ್ ಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿಗೆ ಸಂಬಂಧಿಸಿದಂತೆ ಮಾರ್ಚ್ ತಿಂಗಳೊಳಗೆ ನಿಲುವು ಸ್ಪಷ್ಟಪಡಿಸಿ ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ. 

ಸೀಮಾ ಸಿಂಗ್, ಮೇಘನ್ ಸಿಂಗ್ ಮತ್ತು ವಿಕ್ರಮ್ ಸಿಂಗ್ ಎಂಬ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾಟ್ಸಾಪ್ ನ ನೂತನ ಪ್ರೈವಸಿ ಪಾಲಿಯಲ್ಲಿ ಭಾರತೀಯ ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳು ಕುರಿತಂತೆ ಬಿರುಕುಗಳಿದ್ದು, ಈ ಕುರಿತಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಾಟ್ಸಾಪ್ ಸ್ಪಷ್ಟನೆ ನೀಡಬೇಕು ಎಂದು ಕೇಳಿದ್ದಾರೆ. ಅಂತೆಯೇ ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತಾ ಮಾಹಿತಿಯ ಸುರಕ್ಷತೆಯ ಕುರಿತು ಆಶ್ವಾಸನೆ ನೀಡಬೇಕು ಎಂದು ಕೇಳಲಾಗಿದೆ. ಅಂತೆಯೇ ಸಚಿವಾಲಯ ಈ ಸಂಬಂಧ ಕೂಡಲೇ ಮಾರ್ಗಸೂಚಿ ರಚಿಸಿ ಬಿಡುಗಡೆ ಮಾಡಿ. ಆ ಮೂಲಕ ಭಾರತೀಯ ಬಳಕೆದಾರರ ಗೌಪ್ಯ ದತ್ತಾಂಶಗಳ ಸಂರಕ್ಷಣೆಗೆ ನೀತಿ ನಿಯಮ ರೂಪಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಚೇತನ್ ಶರ್ಮಾ, ಇಂತಹುದೇ ವಿಚಾರಣೆ ಏಕ ಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಈ ವಿಷಯ ಪರಿಶೀಲಿಸುತ್ತಿದ್ದು, ವಾಟ್ಸಾಪ್ ನಿಂದ ಕೆಲವು ಮಾಹಿತಿಯನ್ನು ಸಹ ಕೋರಲಾಗಿದೆ ಎಂದು ಹೇಳಿದರು. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp