ಕೇರಳ: ಹೈಕೋರ್ಟ್ ನ್ಯಾಯಮೂರ್ತಿ ಕಾರಿನ ಮೇಲೆ ಕಪ್ಪುಆಯಿಲ್ ಎರಚಿದ ಪ್ರತಿಭಟನಾಕಾರರು!

ಹೈಕೋರ್ಟ್ ನ್ಯಾಯಮೂರ್ತಿ ವಿ ಶಿರ್ಸಿ ಅವರ ಕಾರಿನ ಮೇಲೆ ಪ್ರತಿಭಟನಾನಿರತರು ಕಪ್ಪು ಆಯಿಲ್ ಎರೆಚಿರುವ ಘಟನೆ ಕೇರಳದಲ್ಲಿ ನಡೆದಿದೆ.

Published: 03rd February 2021 03:13 PM  |   Last Updated: 03rd February 2021 03:13 PM   |  A+A-


Protester pours black oil over judge's vehicle

ಕಾರಿಗೆ ಕಪ್ಪು ಆಯಿಲ್ ಎರಚಿದ ಪ್ರತಿಭಟನಾಕಾರರು

Posted By : Srinivasamurthy VN
Source : The New Indian Express

ಕೊಚ್ಚಿ: ಹೈಕೋರ್ಟ್ ನ್ಯಾಯಮೂರ್ತಿ ವಿ ಶಿರ್ಸಿ ಅವರ ಕಾರಿನ ಮೇಲೆ ಪ್ರತಿಭಟನಾನಿರತರು ಕಪ್ಪು ಆಯಿಲ್ ಎರೆಚಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳ ಹೈಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಪೊಲೀಸರು ಎರುಮೇಲಿ ನಿವಾಸಿ ಆರ್ ರಘುನಾಥನ್ ನಾಯರ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಯುವತಿಯೋರ್ವಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರಘುನಾಥನ್ ನಾಯರ್ ಪ್ರತಿಭಟನಾ ಫಲಕವನ್ನು ಪ್ರದರ್ಶಿಸಿ ಹೈಕೋರ್ಟ್ ಅವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಏಕಾಏಕಿ ನ್ಯಾಯಮೂರ್ತಿಗಳ ಕಾರಿನತ್ತ ಧಾವಿಸಿ ಕಾರಿನ ಮೇಲೆ ಕಪ್ಪು ಬಣ್ಣದ ಆಯಿಲ್ ಎರಚಿದರು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ರಘುನಾಥನ್ ರನ್ನು  ಬಂಧಿಸಿದ್ದಾರೆ.

ಪ್ರಾಥಮಿಕ ತನಿಖಾ ಮೂಲಗಳ ಪ್ರಕಾರ 2018ರ ಮಾರ್ಚ್ 22ರಂದು ಕೊಟ್ಟಾಯಂ ಜಿಲ್ಲೆಯ ಎರುಮೇಲಿಯಲ್ಲಿ ಜಸ್ನಾ ಮಾರಿಯಾ ಎಂಬ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದೆ ಎರುಮೇಲಿಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಆದರೆ ಪ್ರಕರಣ ನಡೆದು ಮೂರು ವರ್ಷಗಳೇ ಆದರೂ ಈ ವರೆಗೂ ಈ ಸಂಬಂಧ ಯಾವುದೇ ರೀತಿಯ ಸುಳಿವು ದೊರೆತಿರಲಿಲ್ಲ. ಹೀಗಾಗಿ ರಘುನಾಥನ್ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಈ ಪ್ರಕರಣವನ್ನು ಕೇರಳ ಕ್ರೈಂ ಬ್ರಾಂಚ್ ವಿಚಾರಣೆ ನಡೆಸುತ್ತಿದ್ದು, ಈ ವರೆಗೂ ಯಾವುದೇ ರೀತಿಯ ಮಹತ್ವದ ಮಾಹಿತಿ ಲಭ್ಯವಾಗಿಲ್ಲ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp