ತಮಿಳುನಾಡಿನಲ್ಲಿ 'ಅಮ್ಮ' ಸರ್ಕಾರ ಮತ್ತೆ ತರಲು ಶಶಿಕಲಾ ಮಹತ್ವದ ಪಾತ್ರ ವಹಿಸಲಿದ್ದಾರೆ: ದಿನಕರನ್

ವಿ.ಕೆ.ಶಶಿಕಲಾ ಫೆಬ್ರವರಿ 7 ರಂದು ತಮಿಳುನಾಡಿಗೆ ಮರಳಲಿದ್ದು, ಮತ್ತೆ ರಾಜ್ಯದಲ್ಲಿ 'ಅಮ್ಮ' ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರ ಸೋದರಳಿಯ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.

Published: 03rd February 2021 02:12 PM  |   Last Updated: 03rd February 2021 02:39 PM   |  A+A-


Shashikala

ಶಶಿಕಲಾ

Posted By : Shilpa D
Source : The New Indian Express

ಮಧುರೈ:  ವಿ.ಕೆ.ಶಶಿಕಲಾ ಫೆಬ್ರವರಿ 7 ರಂದು ತಮಿಳುನಾಡಿಗೆ ಮರಳಲಿದ್ದು, ಮತ್ತೆ ರಾಜ್ಯದಲ್ಲಿ 'ಅಮ್ಮ' ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರ ಸೋದರಳಿಯ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.

ಮಧುರೈ ನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದ ಬರುವ ಶಶಿಕಲಾ ಅವರಿಗೆ ಹೊಸೂರಿನಿಂದ ತಮಿಳು ನಾಡಿನವರೆಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದು ಹೇಳಿದ್ದಾರೆ.

ಅವರು ಬಿಡುಗಡೆಯಾದ ದಿನದಿಂದ ತಮಿಳುನಾಡಿನಲ್ಲಿ ಅನೇಕ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಎಂದು ಹೇಳಿದ್ದಾರೆ, ಶಶಿಕಲಾ ತಾವು ಬಿಡುಗಡೆಯಾದ ನಂತರ ಮಾಜಿ ಸಿಎಂ ಜಯಲಲಿತಾ ಅವರ ಸಮಾದಿಗೆ ಭೇಟಿ ನೀಡಲು ಬಯಸ್ಸಿದ್ದರು. ಆದರೆ ರಾಜಕೀಯ ದುರುದ್ದೇಶದಿಂದ ಸ್ಮಾರಕವನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರ ಸ್ಥಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ದಿನಕರನ್, ಪಕ್ಷದ ಬೈಲಾಗಳ ಪ್ರಕಾರ, ಪ್ರಧಾನ ಕಾರ್ಯದರ್ಶಿಯನ್ನು ತೆಗೆದುಹಾಕುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಈ ಜನರು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ತೆಗೆದರು, ಹೀಗಾಗಿ ಕಾನೂನು ಹೋರಾಟದ ಮೂಲಕ ಮತ್ತೆ ಆ ಸ್ಥಾನವನ್ನು ವಾಪಸ್ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ದಿನಕರನ್, ಕಳೆದ 10 ವರ್ಷಗಳಿಂದ ಸ್ಟಾಲಿನ್ ಅಧಿಕಾರಕ್ಕಾಗಿ ಕಾಯುತ್ತಿದ್ದಾರೆ, ಆದರೆ ಅವರ ಕನಸು ಎಂದಿಗೂ ನಿಜವಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ. ತಮಿಳುನಾಡು ಜನರಿಗೆ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಅಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಶಶಿಕಲಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ದಿನಕರನ್ ತಿಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಶಿಕಲಾ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿನಕರನ್, "ಸದ್ಯಕ್ಕೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ, ಆದರೆ ಅದಕ್ಕೆ  ಕಾನೂನು ಪರಿಹಾರಗಳಿವೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp