ಗಣರಾಜ್ಯ ದಿನದ ಹಿಂಸಾಚಾರ: ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ನಕಾರ

ಗಣರಾಜ್ಯೋತ್ಸವದಂದು ಕೆಂಪು ಕೋಟೆ ಸೇರಿ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆಗೆ ಕೋರಿ ಹಾಗೂ ಮಾಧ್ಯಮಗಳಿಗೆ ರೈತರನ್ನು ಭಯೋತ್ಪಾದರೆಂದು ಹೇಳದಂತೆ ನಿರ್ದೇಶನ ನೀಡಲು ಮನವಿ ಮಾಡಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

Published: 03rd February 2021 03:13 PM  |   Last Updated: 03rd February 2021 03:23 PM   |  A+A-


ಸುಪ್ರೀಂ ಕೋರ್ಟ್

Posted By : Srinivas Rao BV
Source : PTI

ನವದೆಹಲಿ: ಗಣರಾಜ್ಯೋತ್ಸವದಂದು ಕೆಂಪು ಕೋಟೆ ಸೇರಿ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆಗೆ ಕೋರಿ ಹಾಗೂ ಮಾಧ್ಯಮಗಳಿಗೆ ರೈತರನ್ನು ಭಯೋತ್ಪಾದರೆಂದು ಹೇಳದಂತೆ ನಿರ್ದೇಶನ ನೀಡಲು ಮನವಿ ಮಾಡಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಸಿಜೆಐ ಎಸ್ಎ ಬೋಬ್ಡೆ, ನ್ಯಾ. ಎಎಸ್ ಬೋಪಣ್ಣ, ನ್ಯಾ. ವಿ ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ, ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ್ದು, ಮೂವರು ಅರ್ಜಿದಾರರಿಗೆ ಸರ್ಕಾರವನ್ನೇ ಕೇಳಿ ಆ ನಂತರ ಇಲ್ಲಿಗೆ ಬನ್ನು ಎಂಬ ಸೂಚನೆ ನೀಡಿದೆ. 

"ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ಬಗ್ಗೆ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ ಎಂಬ ಖಾತ್ರಿ ನಮಗಿದೆ. " ಹಿಂಸಾಚಾರದ ಬಗ್ಗೆ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ನಾವು ಮಧ್ಯಪ್ರವೇಶ ಮಾಡುವುದಿಲ್ಲ, ನೀವು ಸರ್ಕಾರವನ್ನೇ ಕೇಳಿ" ಎಂದು ಸಿಜೆಐ ಹೇಳಿದ್ದಾರೆ. 

ಜ.26 ರಂದು ದುರದೃಷ್ಟ ಘಟನೆ ನಡೆಯಿತು. ಉಭಯ ಪಕ್ಷಗಳ ವಿರುದ್ಧವೂ ಆರೋಪವಿದೆ, ಆದರೆ ಸಮಸ್ಯೆ ಎದುರಿಸಿದ್ದು ಜನ ಸಾಮಾನ್ಯರಷ್ಟೇ ಎಂದು ಅರ್ಜಿದಾರ ಅಡ್ವೊಕೇಟ್ ವಿಶಾಲ್ ತಿವಾರಿ ತಮ್ಮ ವಾದದಲ್ಲಿ ಹೇಳಿದರು. 

ಅಷ್ಟೇ ಅಲ್ಲದೇ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಸಿಜೆಐ ಹೇಳಿದಾಗ ಪ್ರತಿಕ್ರಿಯೆ ನೀಡಿದ ವಿಶಾಲ್, ತನಿಖೆ ಏಕಪಕ್ಷೀಯವಾಗಿರಬಾರದು ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಸಿಜೆಐ, ನಿಮ್ಮ ಪ್ರಾರ್ಥನೆ ಅದು ಏಕಪಕ್ಷೀಯವಾಗಿರಲಿದೆ ಎಂಬ ಆಧಾರದಲ್ಲಿದೆ. ಆದರೆ ತನಿಖೆ ಎಂದರೇನು? ತನಿಖೆಯಲ್ಲಿ ಎಲ್ಲಾ ಅಂಶಗಳನ್ನೂ ಪರಿಗಣಿಸಬೇಕು ಎಂದು ಸಿಜೆಐ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp