ಸದನದಲ್ಲಿ ಮೊಬೈಲ್ ಮೂಲಕ ಕಲಾಪ ರೆಕಾರ್ಡು: ರಾಜ್ಯಸಭಾ ಸದಸ್ಯರಿಗೆ ಸಭಾಪತಿ ವೆಂಕಯ್ಯ ನಾಯ್ಡು ಛೀಮಾರಿ 

ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆ ಅದನ್ನು ಮೊಬೈಲ್ ಫೋನ್ ಮೂಲಕ ರೆಕಾರ್ಡ್ ಮಾಡಿಕೊಳ್ಳುವ ಸಂಸದರಿಗೆ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಛೀಮಾರಿ ಹಾಕಿರುವ ಪ್ರಸಂಗ ನಡೆದಿದೆ.

Published: 03rd February 2021 10:59 AM  |   Last Updated: 03rd February 2021 10:59 AM   |  A+A-


M Venkaiah Naidu

ಎಂ ವೆಂಕಯ್ಯ ನಾಯ್ಡು

ANI

ನವದೆಹಲಿ: ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆ ಅದನ್ನು ಮೊಬೈಲ್ ಫೋನ್ ಮೂಲಕ ರೆಕಾರ್ಡ್ ಮಾಡಿಕೊಳ್ಳುವ ಸಂಸದರಿಗೆ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಛೀಮಾರಿ ಹಾಕಿರುವ ಪ್ರಸಂಗ ನಡೆದಿದೆ.

ಸದನದ ಒಳಗೆ ಇಂತಹ ಅನುಚಿತ ವರ್ತನೆ ಮತ್ತು ಚಟುವಟಿಕೆಗಳು ಸಂಸದೀಯ ಶಿಷ್ಟಾಚಾರಗಳಿಗೆ ವಿರುದ್ಧವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆ ಕೊಠಡಿಯೊಳಗೆ ಮೊಬೈಲ್ ಫೋನ್ ಬಳಸುವುದಕ್ಕೆ ನಿರ್ಬಂಧವಿರುತ್ತದೆ. ಆದರೆ ಕೆಲವು ಸದಸ್ಯರು ಸದನದ ಕಲಾಪಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಮೊಬೈಲ್ ಬಳಸುತ್ತಾರೆ. ಸದನದೊಳಗೆ ಕುಳಿತುಕೊಂಡು ಅಂತಹ ನಡವಳಿಕೆ ತೋರುವುದು ಸಂಸತ್ತಿನ ಘಟನೆ, ಶಿಷ್ಠಾಚಾರಗಳಿಗೆ ವಿರುದ್ಧವಾಗುತ್ತದೆ ಎಂದರು.

ಇಂದು ಸೋಷಿಯಲ್ ಮೀಡಿಯಾಗಳ ಪ್ರಭಾವ ಬಹಳವಾಗಿರುವುದರಿಂದ ಹೀಗೆ ರೆಕಾರ್ಡ್ ಮಾಡಿಕೊಂಡ ಕಲಾಪಗಳು ಬಹಳ ಬೇಗನೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಆಗ ಅದು ಸದನದ ಸದಸ್ಯರಿಗೆ ಸಿಗುವ ಸವಲತ್ತುಗಳ ದುರ್ಬಳಕೆ ಮತ್ತು ಸದನವನ್ನು ನಿಂದಿಸಿದಂತಾಗುತ್ತದೆ ಎಂದು ವೆಂಕಯ್ಯ ನಾಯ್ಡು ಆಕ್ಷೇಪ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅದನ್ನು ಚರ್ಚೆಗೆ ತರಬೇಕು, ಇಲ್ಲದಿದ್ದರೆ ಸದನದ ಕಲಾಪವನ್ನು ರದ್ದುಪಡಿಸುವಂತೆ ಕೋರಿ ವಿರೋಧ ಪಕ್ಷಗಳ ನಾಯಕರು ಮಂಡಿಸಿದ್ದ ನೊಟೀಸ್ ನ್ನು ವೆಂಕಯ್ಯ ನಾಯ್ಡು ಅವರು ರದ್ದುಪಡಿಸಿದ್ದರಿಂದ ನಿನ್ನೆ ರಾಜ್ಯಸಭಾ ಕಲಾಪವನ್ನು ಬಹಿಷ್ಕರಿಸಿ ವಿರೋಧ ಪಕ್ಷಗಳ ಸದಸ್ಯರು ಹೊರನಡೆದಿದ್ದರು. 

ನಿನ್ನೆ ಲೋಕಸಭಾ ಕಲಾಪ ಸಹ ವಿರೋಧ ಪಕ್ಷದವರ ತೀವ್ರ ಗದ್ದಲ, ಕೋಲಾಹಲದಿಂದಾಗಿ ಮೂರು ಬಾರಿ ಮುಂದೂಡಲ್ಪಟ್ಟಿತ್ತು.


Stay up to date on all the latest ರಾಷ್ಟ್ರೀಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp