ಕ್ರಿಕೆಟರ್ ಗಳಿಂದ ಟ್ವೀಟ್ ಮಾಡಿಸಿದರೆ ದೇಶಕ್ಕಾದ ಹಾನಿಗೆ ಪರಿಹಾರವಲ್ಲ: ಶಶಿ ತರೂರ್

ರೈತರ ಪ್ರತಿಭಟನೆ ಕುರಿತ ಸರ್ಕಾರದ ನಿಲುವು ಸಮರ್ಥಿಸಿಕೊಳ್ಳಲು ಕ್ರಿಕೆಟಿಗರಿಂದ ಟ್ವೀಟ್ ಮಾಡಿಸಿದರೆ, ದೇಶಕ್ಕಾದ ಹಾನಿಗೆ ಪರಿಹಾರವಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

Published: 04th February 2021 01:27 PM  |   Last Updated: 04th February 2021 01:27 PM   |  A+A-


Shashi Tharoor

ಶಶಿ ತರೂರ್

Posted By : Srinivasamurthy VN
Source : PTI

ನವದೆಹಲಿ: ರೈತರ ಪ್ರತಿಭಟನೆ ಕುರಿತ ಸರ್ಕಾರದ ನಿಲುವು ಸಮರ್ಥಿಸಿಕೊಳ್ಳಲು ಕ್ರಿಕೆಟಿಗರಿಂದ ಟ್ವೀಟ್ ಮಾಡಿಸಿದರೆ, ದೇಶಕ್ಕಾದ ಹಾನಿಗೆ ಪರಿಹಾರವಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಭಾರತದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಖ್ಯಾತ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಖ್ಯಾತನಾಮರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಬಳಿಕ ಕೇಂದ್ರ ಸರ್ಕಾರ ಹೊರಡಿಸಿದ್ದ ಪ್ರಕಟಣೆಯನ್ನು ಬೆಂಬಲಿಸಿ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ಮತ್ತು ಬಾಲಿವುಡ್ ನ ಹಲವಾರು ಮಂದಿ ಟ್ವೀಟ್ ಮಾಡಿದ್ದರು.

ಇದೀಗ ಈ ಕುರಿತು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, 'ಕ್ರಿಕೆಟಿಗರಿಂದ ನಿಮ್ಮ ಪರವಾಗಿ ಟ್ವೀಟ್ ಮಾಡಿಸಿ ಕೂಡಲೇ ಭಾರತಕ್ಕೆ ನೀವು ಮಾಡಿರುವ ಹಾನಿ ಮುಚ್ಚಿ ಹೋಗುವುದಿಲ್ಲ.  ಭಾರತದ ಗಣ್ಯರನ್ನು ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವಂತೆ ಮಾಡುತ್ತಿರುವ ಸರ್ಕಾರದ ನಡೆಯು ಮುಜುಗರ ಸೃಷ್ಟಿಸುತ್ತಿದೆ. ವಿಶ್ವದಲ್ಲಿ ಭಾರತಕ್ಕೆ ಇರುವ ಮನ್ನಣೆಗೆ ನೀವು ಮಾಡಿರುವ ಹಾನಿಗೆ ಕ್ರಿಕೆಟರ್ ಗಳ ಅಥವಾ ಸೆಲೆಬ್ರಿಟಿಗಳು ಮಾಡುವ ಟ್ವೀಟ್ ಗಳು ಪರಿಹಾರವಲ್ಲ. ಈ ಎಲ್ಲಾ ತೊಂದರೆಗಳಿಗಿರುವ ಪರಿಹಾರವೆಂದರೆ ಕೃಷಿ ಕಾಯ್ದೆಯನ್ನು ಹಿಂಪಡೆದು ರೈತರೊಂದಿಗೆ ಮಾತುಕತೆ ನಡೆಸುವುದು ಎಂದು ಟ್ವೀಟ್ ಮಾಡಿದ್ದಾರೆ.

ಈ ಮೊದಲು ದೇಶದ ಆಂತರಿಕ ವಿಷಯದಲ್ಲಿ ವಿದೇಶಿಯರು ಪ್ರತಿಕ್ರಿಯಿಸುತ್ತಿರುವುದರ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯವು ಪ್ರಕಟಣೆಯನ್ನು ಹೊರಡಿಸಿತ್ತು. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp