ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಒದಗಿಸುವ ಪಾತ್ರವನ್ನು ಭಾರತ ನಿರ್ವಹಿಸಬಹುದು: ರಾಜನಾಥ್ ಸಿಂಗ್
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭೌಗೋಳಿಕವಾಗಿ ರಾಜಕೀಯವಾಗಿ ವಿಶ್ವಾಸಾರ್ಹ ಪಾಲುದಾರನಾಗಿರುವುದರಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರನ ಪಾತ್ರವನ್ನು ವಹಿಸಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 04th February 2021 11:53 AM | Last Updated: 04th February 2021 11:53 AM | A+A A-

ರಾಜನಾಥ್ ಸಿಂಗ್
ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭೌಗೋಳಿಕವಾಗಿ ರಾಜಕೀಯವಾಗಿ ವಿಶ್ವಾಸಾರ್ಹ ಪಾಲುದಾರನಾಗಿರುವುದರಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರನ ಪಾತ್ರವನ್ನು ವಹಿಸಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭೌಗೋಳಿಕವಾಗಿ-ರಾಜಕೀಯವಾಗಿ ನಾವು ಸವಾಲಿನ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಮಿಲಿಟರಿ ಪ್ರತಿರೋಧವನ್ನು ಎದುರಿಸುವುದಲ್ಲದೆ ನೈಸರ್ಗಿಕ ವಿಕೋಪಗಳಾದ ಕೋವಿಡ್-19ನಂತಹ ಸಾಂಕ್ರಾಮಿಕಗಳನ್ನು ಸಹ ಎದುರಿಸುತ್ತಿದ್ದು ಅದು ಕಳೆದ ಒಂದು ವರ್ಷದಿಂದ ನಮ್ಮನ್ನು ಸಾಕಷ್ಟು ಸಂಕಷ್ಟಕ್ಕೊಡಿದೆ ಎಂದು ಹೇಳಿದರು.
ಹೀಗಾಗಿ ಹಲವು ಆಯಾಮಗಳಲ್ಲಿ ಬೆದರಿಕೆಗಳು ಎದುರಾದಾಗ ಜಾಗತಿಕ ಮಟ್ಟದ ವಿಷಯಗಳಲ್ಲಿ ಸಮಾನ ಅಭಿಪ್ರಾಯಗಳನ್ನು ಹೊಂದಿರುವ ದೇಶಗಳ ಜೊತೆ ಸಂಬಂಧಗಳನ್ನು ಬೆಳೆಸುವುದು ಭಾರತಕ್ಕೆ ಮುಖ್ಯವಾಗುತ್ತದೆ ಎಂದರು.
ಅವರು ನಿನ್ನೆ ಸಾಯಂಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿ ವಾಯುಸೇನಾ ಮುಖ್ಯಸ್ಥರ ಸಿಬ್ಬಂದಿ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ಪ್ರಾದೇಶಿಕ ಸ್ಥಿರತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಾಯುಸೇನೆಯ ಶಕ್ತಿ, ಸಾಮರ್ಥ್ಯ ಪ್ರಮುಖ ಪಾತ್ರ ವಹಿಸಲಿದ್ದು ಗಾಳಿ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳಿಂದ ಒದಗಿಸಲಾದ ಕುಶಲತೆಯ ಸ್ವಾತಂತ್ರ್ಯವು ರಾಷ್ಟ್ರವನ್ನು ಸುಸ್ಥಿರ ಮತ್ತು ಸ್ಪಷ್ಟವಾಗಿ ಉಲ್ಬಣಗೊಳ್ಳುವ ರೀತಿಯಲ್ಲಿ ಪ್ರಭಾವಿಸಲು ಅನುವು ಮಾಡಿಕೊಡುತ್ತದೆ ಎಂದರು.
ಆಕ್ರಮಣಕಾರಿ ಸಾಮರ್ಥ್ಯಗಳಲ್ಲಿ ಭಾರತೀಯ ವಾಯುಪಡೆಯು ಮುಂಚೂಣಿಯಲ್ಲಿದೆ, ಅದರ ವ್ಯಾಪ್ತಿ, ವೇಗ ಮತ್ತು ನಿಖರತೆಯೊಂದಿಗೆ ಅವರು ಹೇಳಿದರು.