ಭಾರತಕ್ಕಾಗಿ ಭಾರತವೇ ನಿರ್ಧರಿಸಲಿದೆ: ರಿಹಾನ್ನಾಗೆ ಸಚಿನ್, ಕೊಹ್ಲಿ ಮತ್ತಿತರರ ತಿರುಗೇಟು!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನ್ನಾಗೆ ಭಾರತದ ಕ್ರಿಕೆಟಿಗರಾದ ಸಚಿನ್  ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕಟಿಗರು ತಿರುಗೇಟು ನೀಡಿದ್ದಾರೆ.

Published: 04th February 2021 11:28 AM  |   Last Updated: 05th February 2021 01:45 PM   |  A+A-


Sachin-Kohli-Rihanna

ಸಚಿನ್ ಕೊಹ್ಲಿ-ರಿಹಾನ್ನಾ

Posted By : Srinivasamurthy VN
Source : PTI

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನ್ನಾಗೆ ಭಾರತದ ಕ್ರಿಕೆಟಿಗರಾದ ಸಚಿನ್  ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕಟಿಗರು ತಿರುಗೇಟು ನೀಡಿದ್ದಾರೆ.

ರೈತರ ಹೋರಾಟ ಬೆಂಬಲಿಸಿ ರಿಹಾನ್ನಾ ಮಾಡಿದ ಟ್ವೀಟ್ ಗೆ ಇದೀಗ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ವೀಟ್ ಗೆ ತಿರುಗೇಟು ನೀಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು, ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,.. ಇಲ್ಲಿ ಬಾಹ್ಯವ್ಯಕ್ತಿ ಅಥವಾ ಶಕ್ತಿಗಳು ಪ್ರೇಕ್ಷಕರಾಗಬಹುದು... ಆದರೆ ಪಾತ್ರದಾರಿಗಳಲ್ಲ. ಭಾರತೀಯರಿಗೆ ಭಾರತ ಏನು ಎಂಬುದು ತಿಳಿದಿದೆ ಮತ್ತು ಭಾರತಕ್ಕಾಗಿ ಭಾರತವೇ ನಿರ್ಧರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸಚಿನ್ ಟ್ವೀಟ್ ಬೆಂಬಲ ನೀಡಿವಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಟ್ವೀಟ್ ಮಾಡಿದ್ದು, ಭಿನ್ನಾಭಿಪ್ರಾಯಗಳ ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಶಾಂತಿಯಿಂದ ಸಮಸ್ಯೆ ಬಗೆ ಹರಿಸಿಕೊಳ್ಳಲು ನಾವು ಒಗ್ಗಟ್ಟಾಗಿರಬೇಕು. ಆದ ಮಾತ್ರ ಸೌಹಾರ್ದಯುತ ಪರಿಹಾರವು ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಕೂಡ ಟ್ವೀಟ್ ಮಾಡಿದ್ದು, ಒಗ್ಗಟ್ಟಿನಿಂದ ಪರಿಹರಿಸಲು ಸಾಧ್ಯವಾಗದೇ ಇರುವ ಸಮಸ್ಯೆಗಳೇ ಇಲ್ಲ. ಎಲ್ಲರೂ ಒಗ್ಗೂಡಿ ನಮ್ಮ ಆಂತರಕಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ಕೂಡ ಟ್ವೀಟ್ ಮಾಡಿದ್ದು, ಒಗ್ಗಟ್ಟಿನಿಂದ ಭಾರತ ಯಾವಾಗಲೂ ಬಲಶಾಲಿಯಾಗಿದೆ. ನಾವೆಲ್ಲರೂ ಅದೇ ಒಗ್ಗಟ್ಟಿನಿಂದ ನಿಂತು ಪರಿಹಾರ ಕಂಡುಕೊಳ್ಳುವುದ ಅಗತ್ಯ.  ನಮ್ಮ ರೈತರು ನಮ್ಮ ರಾಷ್ಟ್ರದ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಮತ್ತು ಒಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ವಿಚಾರವಾಗಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರೂ ಕೂಡ ಟ್ವೀಟ್ ಮಾಡಿದ್ದು, ಭಾರತೀಯ ಆರ್ಥ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿಕ ಬಹಳ ಮುಖ್ಯವಾದ ಭಾಗವಾಗಿದ್ದಾರೆ. ರೈತರು ಯಾವುದೇ ದೇಶದ ಪರಿಸರ ವ್ಯವಸ್ಥೆಯ ಬೆನ್ನೆಲುಬು. ಇದು ಆಂತರಿಕ ವಿಷಯವಾಗಿದ್ದು, ಪರಸ್ಪರ ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. 

Agriculture is a very important part of the machinery of the Indian economic system. Farmers are the backbone of any country’s ecosystem. This is an internal matter which I’m sure will be resolved through dialogue. Jai Hind! #IndiaStandsTogether #IndiaAgainstPropoganda

ಇನ್ನು ಟೀಂ ಇಂಡಿಯಾ ಮಾಜಿ ಕೋಚ್ ಹಾಗೂ ಭಾರತ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರೂ ಕೂಡ ಟ್ವೀಟ್ ಮಾಡಿದ್ದು, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ತನ್ನ ಆಂತರಿಕ ಸಮಸ್ಯೆಗಳನ್ನು ಸೌಹಾರ್ದಯುತ ಪರಿಹಾರಗಳಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ತಿರುಗೇಟು ನೀಡಿದ್ದಾರೆ.

ನಾವು ಎಲ್ಲರೂ ಒಗ್ಗೂಡಿದ್ದರೆ ಯಾವುದೇ ಸಮಸ್ಯೆಯನ್ನು ಇಂದು ಅಥವಾ ನಾಳೆ ಪರಿಹರಿಸಬಹುದು. ಆದರೆ ಇದರರ್ಥ ನಾವು ವಿಭಜನೆಯನ್ನು ರಚಿಸುತ್ತೇವೆ ಅಥವಾ ಬಾಹ್ಯ ಶಕ್ತಿಗಳಿಂದ ತೊಂದರೆಗೊಳಗಾಗುತ್ತೇವೆ ಎಂದಲ್ಲ. ಸೌಹಾರ್ದಯುತ ಮತ್ತು ಪಕ್ಷಪಾತವಿಲ್ಲದ ಚರ್ಚೆಯ ಮೂಲಕ ಎಲ್ಲವನ್ನೂ ಪರಿಹರಿಸಬಹುದು ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp