'ನಿಮ್ಮ ಹೋರಾಟ ಮುಂದುವರಿಸಿ' ಗ್ರೇಟಾ ಥನ್ಬರ್ಗ್ ಗೆ ಕನ್ನಯ್ಯ ಕುಮಾರ್ ಬೆಂಬಲ 

ಅಂತರಾಷ್ಟ್ರೀಯ ಪರಿಸರವಾದಿ ಗ್ರೆಟಾ ಧನ್ ಬರ್ಗ್ ಮತ್ತು ಇತರರ ವಿರುದ್ಧ ಭಾರತದಲ್ಲಿ ರೈತರ ಪ್ರತಿಭಟನೆ ಬಗ್ಗೆ ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್, ಗ್ರೆಟಾ ಥನ್ ಬರ್ಗ್ ಗೆ ಬೆಂಬಲ ಸೂಚಿಸಿದ್ದಾರೆ.

Published: 05th February 2021 09:10 AM  |   Last Updated: 05th February 2021 09:23 AM   |  A+A-


Kannaiah Kumar

ಕನ್ನಯ್ಯ ಕುಮಾರ್

Posted By : Sumana Upadhyaya
Source : PTI

ನವದೆಹಲಿ: ಅಂತರಾಷ್ಟ್ರೀಯ ಪರಿಸರವಾದಿ ಗ್ರೆಟಾ ಥನ್ಬರ್ಗ್ ಮತ್ತು ಇತರರ ವಿರುದ್ಧ ಭಾರತದಲ್ಲಿ ರೈತರ ಪ್ರತಿಭಟನೆ ಬಗ್ಗೆ ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್, ಗ್ರೆಟಾ ಥನ್ಬರ್ಗ್ ಗೆ ಬೆಂಬಲ ಸೂಚಿಸಿದ್ದಾರೆ.

ಪ್ರೀತಿಯ ಗ್ರೆಟಾ ಥನ್ಬರ್ಗ್ ನಿಮಗೆ ನಮ್ಮ ಕ್ಲಬ್ ಗೆ ಸ್ವಾಗತ. ದೆಹಲಿ ಪೊಲೀಸರು ಜಯ್ ಶಾ ಅವರ ತಂದೆಯ ನಿರ್ದೇಶನದ ಮೇರೆಗೆ ಎಫ್ಐಆರ್ ನ್ನು ನಿಮ್ಮ ವಿರುದ್ಧ ದಾಖಲಿಸಿದ್ದಾರೆ. ನೀವು ಉತ್ತಮ ದಾರಿಯಲ್ಲಿ ಹೋರಾಟ ನಡೆಸುತ್ತಿದ್ದು ಸರಿಯಾದ ದಿಕ್ಕಿನಲ್ಲಿ ಇತಿಹಾಸ ನಿರ್ಮಿಸಲಿದ್ದೀರಿ, ಇದರ ಭಾಗವಾಗಿ ನನ್ನ ಹಲವು ಸ್ನೇಹಿತರು ಈಗಾಗಲೇ ಜೈಲಿನಲ್ಲಿದ್ದಾರೆ, ನೀವು ನಿರಂತರವಾಗಿ ಹೋರಾಟ ಮಾಡುತ್ತಿರಿ ಎಂದಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಗ್ರೆಟಾ ಥನ್ಬರ್ಗ್ ಸಹಾಯವಿದ್ದವರಿಗೆ ಟೂಲ್ ಕಿಟ್ ಗಳನ್ನು ನೀಡುವುದಾಗಿ ಟ್ವೀಟ್ ಮಾಡಿದ್ದರು. ನಿನ್ನೆ ಎಫ್ಐಆರ್ ದಾಖಲಾದ ನಂತರವೂ ಗ್ರೆಟಾ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ದ್ವೇಷ, ಬೆದರಿಕೆಗಳಿಗೆ ಹೆದರುವುದಿಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯಿಂದ ನನ್ನ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp