ದಾಂತೇವಾಡ: ವಾಂಟೆಡ್ ಮಾವೋವಾದಿ ಕಮಾಂಡರ್ ಹತ್ಯೆ
ದಕ್ಷಿಣ ರಾಯಪುರದಿಂದ 450 ಕಿಲೋ ಮೀಟರ್ ದೂರದಲ್ಲಿರುವ ದಾಂತೇವಾಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಿರಿಯ ಮಾವೋವಾದಿ ಕಮಾಂಡರ್ ಒಬ್ಬನನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ.
Published: 06th February 2021 02:41 PM | Last Updated: 06th February 2021 02:41 PM | A+A A-

ಸಾಂದರ್ಭಿಕ ಚಿತ್ರ
ರಾಯಪುರ: ದಕ್ಷಿಣ ರಾಯಪುರದಿಂದ 450 ಕಿಲೋ ಮೀಟರ್ ದೂರದಲ್ಲಿರುವ ದಾಂತೇವಾಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಿರಿಯ ಮಾವೋವಾದಿ ಕಮಾಂಡರ್ ಒಬ್ಬನನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ.
ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್ಸ್ ಮತ್ತು ಮಾವೋವಾದಿಗಳ ನಡುವೆ ಅರಣ್ಯ ಪ್ರದೇಶವಾದ ಸುರ್ನಾರ್ ಮತ್ತು ಟೆಟಮ್ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮಾಸಾ ಮುಚಾಕಿ ಎಂದು ಗುರುತಿಸಲಾದ 31 ವರ್ಷದ ಹಿರಿಯ ಮಾವೋವಾದಿ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ.
ಆತನಿಗಾಗಿ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ವಿರುದ್ಧ ಅನೇಕ ಅಪರಾಧ ಕೇಸ್ ಗಳು ದಾಖಲಾಗಿವೆ ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ
ಮುಚಾಕಿ ದಂತೇವಾಡಾದಲ್ಲಿನ ಕಾತೆಕಲ್ಯಾಣ ಪ್ರದೇಶ ಸಮಿತಿಯ ಕಮಾಂಡರ್ ಆಗಿದ್ದ. ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳಿಗೆ ಯಾವುದೇ ಗಾಯವಾದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಸ್ಪಿ ತಿಳಿಸಿದ್ದಾರೆ. ದಕ್ಷಿಣ ಛತ್ತೀಸ್ ಗಢದ ಬಸ್ತಾರ್ ವಲಯದಲ್ಲಿ ನಕ್ಸಲ್ ಪೀಡಿತ ಭಾದಿತ ಏಳು ಪ್ರದೇಶಗಳಲ್ಲಿ ದಾಂತೇವಾಡ ಕೂಡಾ ಒಂದಾಗಿದೆ.