ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್ ಅವರ ಖ್ಯಾತಿಗೆ ಸರ್ಕಾರ ಚ್ಯುತಿ ತರಬಾರದು: ರಾಜ್ ಠಾಕ್ರೆ

ಸೋಷಿಯಲ್ ಮೀಡಿಯಾ ಟ್ರೋಲಿಂಗ್‌ಗೆ ಕೇಂದ್ರ ಸರ್ಕಾರವು ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರನ್ನು ಒಡ್ಡಬಾರದು ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

Published: 06th February 2021 08:26 PM  |   Last Updated: 06th February 2021 08:26 PM   |  A+A-


ರಾಜ್ ಠಾಕ್ರೆ

Posted By : Raghavendra Adiga
Source : PTI

ಮುಂಬೈ: ಸೋಷಿಯಲ್ ಮೀಡಿಯಾ ಟ್ರೋಲಿಂಗ್‌ಗೆ ಕೇಂದ್ರ ಸರ್ಕಾರವು ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರನ್ನು ಒಡ್ಡಬಾರದು ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಅಮೆರಿಕದ ಪಾಪ್ ತಾರೆ ರಿಹಾನ್ನಾ ಮತ್ತಿತರರು ನೂತನ ಕೃಷಿ ಕಾನೂನುಗಳ ವಿರುದ್ಧದ ರೈತ ಹೋರಾಟವನ್ನು  ಬೆಂಬಲಿಸುವುದುಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಾಗಿದ್ದರೆ, ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಕೂಡ ಅದೇ ಬಗೆಯದಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

ಕ್ರಿಕೆಟ್ ದಂತಕಥೆ ತೆಂಡೂಲ್ಕರ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಅನೇಕ ಗಣ್ಯರು ರಿಹಾನ್ನಾ ಮತ್ತು ಪರಿಸರ ಕಾರ್ಯಕರ್ತೆಗ್ರೇಟಾ ಥನ್‍ಬರ್ಗ್ ಅವರ ರೈತರನ್ನು ಬೆಂಬಲಿಸಿದ ಟ್ವೀಟ್ ಗಳನ್ನು ಅನುಸರಿಸಿ #IndiaTogether ಮತ್ತು #IndiaAgainstPropaganda ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಪರ ಬ್ಯಾಟ್ ಬೀಸಿದ್ದರು,

"ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರ ನಿಲುವನ್ನು ಬೆಂಬಲಿಸುವಂತೆ ಟ್ವೀಟ್ ಮಾಡಲು ಮತ್ತು ಅವರ ಖ್ಯಾತಿಯನ್ನು ಪಣಕ್ಕಿಡುವಂತೆ ಕೇಂದ್ರವು ಕೇಳುವಂತಿಲ್ಲ, . ಈಗ ಅವರು ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಗೆ ತಕ್ಕಸ್ಥಿತಿಯನ್ನು ಎದುರಿಸಬೇಕಾಗಿದೆ" ಎಂದು ರಾಜ್ ಠಾಕ್ರೆ ಸುದ್ದಿಗಾರರಿಗೆ ತಿಳಿಸಿದರು. ಸರ್ಕಾರವು ತನ್ನ ಅಭಿಯಾನದಲ್ಲಿ ಪ್ರಸಿದ್ಧ ವ್ಯಕ್ತಿಗಳ ಬಳಕೆಯನ್ನು ಅಕ್ಷಯ್ ಕುಮಾರ್ ಅವರಂತಹ ನಟರಿಗೆ ಸೀಮಿತಗೊಳಿಸಬೇಕು ಎಂದ ಅವರು "ಅವರು (ತೆಂಡೂಲ್ಕರ್ ಮತ್ತು ಮಂಗೇಶ್ಕರ್) ತಮ್ಮ ಕ್ಷೇತ್ರಗಳಲ್ಲಿ ನಿಜವಾದ ದಂತಕಥೆಗಳಗಿದ್ದು ಬಹಳ ಸರಳ ವ್ಯಕ್ತಿಗಳಗಿದ್ದಾರೆ.ಅವರನ್ನು ಒಂದೇ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಲು ಕೇಳಬಾರದು , "ಅವರು ಹೇಳಿದರು.

ರೈತರ ದುಃಸ್ಥಿತಿಯನ್ನು ಬಿಂಬಿಸುವ ಬಗೆಗೆ ಟ್ವೀಟ್ ಮಾಡುವವರೆಗೂ ರಿಹಾನ್ನಾ ಯಾರೆಂದು ಎಷ್ಟು ಭಾರತೀಯರಿಗೆ ತಿಳಿದಿತ್ತು ಎಂದು ಠಾಕ್ರೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಅದೇ ತರ್ಕದ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ನಲ್ಲಿ "ಅಗಲಿ ಬಾರ್ ಟ್ರಂಪ್ ಸರ್ಕಾರ್"ಎಂದು ಹೇಳುವ ರ್ಯಾಲಿಯನ್ನು ನಡೆಸುವ ಅಗತ್ಯವೇನಿತ್ತು? ಅದು ಆ ದೇಶದ ಆಂತರಿಕ ವಿಷಯವಾಗಿತ್ತು "ಎಂದು ಅವರು ಹೇಳಿದರು,

"ಸರ್ಕಾರವು ಸಮಸ್ಯೆಯನ್ನು ಪರಿಹರಿಸಲು ಬಯಸಿದರೆ, ಅದು ರೈತಮುಖಂಡರೊಂದಿಗೆ ಕುಳಿತು ಮಾತುಕತೆ ನಡೆಸಬಹುದು ಮತ್ತು ಈ ಕಾನೂನುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು" ಎಂದು ಅವರು ಹೇಳಿದರು. ಹೊಸ ಕಾನೂನುಗಳು ಬೆರಳೆಣಿಕೆಯಷ್ಟು ಕಾರ್ಪೊರೇಟ್‌ಗಳಿಗೆ ಮಾತ್ರ ಪ್ರಯೋಜನವಾಗಬಾರದು, "ಕಾನೂನುಗಳಿಗೆ ಕೆಲವು ಪ್ಲಸ್ ಪಾಯಿಂಟ್‌ಗಳಿವೆ ಎಂದು ನಾನು ಭಾವಿಸುತ್ತೇನೆ ಆದರೆ ಕೇಂದ್ರವು ಅವುಗಳನ್ನು ಮತ್ತೆ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಬೇಕಾಗಿದೆ" ಅವರು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp