20 ರೂಪಾಯಿಗಾಗಿ ವಾಗ್ವಾದ: ಮೂವರು ಗ್ರಾಹಕರಿಂದ ರಸ್ತೆ ಬದಿಯ ಇಡ್ಲಿ ವ್ಯಾಪಾರಿಯ ಹತ್ಯೆ!
ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ.
Published: 06th February 2021 03:48 PM | Last Updated: 06th February 2021 04:10 PM | A+A A-

ಹತ್ಯೆ (ಸಾಂಕೇತಿಕ ಚಿತ್ರ)
ಮುಂಬೈ: ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ.
26 ವರ್ಷದ ಯುವಕ ವಿರೇಂದ್ರ ಯಾದವ್ ರಸ್ತೆ ಬದಲಿಯಲ್ಲಿ ಇಡ್ಲಿ ವ್ಯಾಪಾರ ಮಾಡುತ್ತಿದ್ದರು. ಶುಕ್ರವಾರ (ಫೆ.05) ರಂದು ಏಕಾ ಏಕಿ ವ್ಯಾಪಾರಿ ಇದ್ದ ಸ್ಥಳಕ್ಕೆ ಆಗಮಿಸಿದ ಮೂವರು ಗ್ರಾಹಕರು, ನೀನು ನಮಗೆ 20 ರೂಪಾಯಿ ಹಣ ವಾಪಸ್ ಕೊಡಬೇಕು ಎಂದು ಹೇಳಿದ್ದಾರೆ ಇದೇ ಕಾರಣದಿಂದ ವಾಗ್ವಾದ ಪ್ರಾರಂಭವಾಗಿದ್ದು ವಿಕೋಪಕ್ಕೆ ತಿರುಗಿ ಘರ್ಷಣೆ ಉಂಟಾಗಿದೆ.
ಮೂವರು ಗ್ರಾಹಕರು ವ್ಯಾಪಾರಿಯನ್ನು ನೆಲಕ್ಕೆ ತಳ್ಳಿದ ಪರಿಣಾಮ ಆತನ ತಲೆಗೆ ತೀವ್ರವಾದ ಗಾಯಗಳಾಗಿದೆ. ಸ್ಥಳೀಯರು ವಿರೇಂದ್ರ ಯಾದವ್ ನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆಸ್ಪತ್ರೆಗೆ ಕರೆತರುವ ವೇಳೆಗೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮೂವರು ವ್ಯಕ್ತಿಗಳ ವಿರುದ್ಧ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.