ಪಾಲ್ಘಾರ್‌ನಲ್ಲಿ ನೌಕಾಪಡೆ ಅಧಿಕಾರಿಯ ಜೀವಂತ ಸುಟ್ಟ ಅಪಹರಣಕಾರರು!

ಮಹಾರಾಷ್ಟ್ರದಲ್ಲಿ ಪಾಲ್ಘಾರ್‌ನಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಅಪಹರಿಸಿ ಜೀವಂತವಾಗಿ ಸುಟ್ಟು ಹಾಕಲಾಗಿದೆ.

Published: 06th February 2021 11:24 PM  |   Last Updated: 06th February 2021 11:26 PM   |  A+A-


Suraj Kumar Dubey

ಸೂರಜ್ ಕುಮಾರ್ ದುಬೆ

Posted By : Vishwanath S
Source : The New Indian Express

ಮುಂಬೈ: ಮಹಾರಾಷ್ಟ್ರದಲ್ಲಿ ಪಾಲ್ಘಾರ್‌ನಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಅಪಹರಿಸಿ ಜೀವಂತವಾಗಿ ಸುಟ್ಟು ಹಾಕಲಾಗಿದೆ. 

ಜಾರ್ಖಂಡ್ ನ ರಾಂಚಿ ಮೂಲದ 27 ವರ್ಷದ ಸೂರಜ್ ಕುಮಾರ್ ದುಬೆಯನ್ನು ಮೂವರು ದುಷ್ಕರ್ಮಿಗಳು ಚೆನ್ನೈನ ವಿಮಾನ ನಿಲ್ದಾಣದಿಂದ ಅಪಹರಿಸಿದ್ದಾರೆ. ಮೂರು ದಿನಗಳ ಬಳಿಕ ಮಹಾರಾಷ್ಟ್ರದ ಪಾಲ್ಘಾರ್ ಗೆ ಕರೆದುಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾರೆ. 

ಸೂರಜ್ ಕುಮಾರ್ ದುಬೆರನ್ನು ಜೀವಂತವಾಗಿ ಬಿಡಬೇಕಾದರೆ 10 ಲಕ್ಷ ರುಪಾಯಿ ನೀಡಬೇಕೆಂದು ಅಪಹರಣಕಾರರು ನೌಕಾಪಡೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ಒಪ್ಪದ ಕಾರಣ ಫೆಬ್ರವರಿ 5ರಂದು ಬೆಂಕಿ ಹಚ್ಚಿದ್ದಾರೆ. 

ದುಬೆಗೆ ಗಂಭೀರ ಸುಟ್ಟು ಗಾಯಗಳಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ಪಾಲ್ಘಾರ್ ಎಸ್ ಪಿ ದತ್ತಾತ್ರೆಯ ಶಿಂಧೆ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp