74ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾರೀ ಭದ್ರತೆ ನಿಯೋಜನೆ
ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾನುವಾರ ಕೂಡ ಭಾರೀ ಭದ್ರತೆ ಮುಂದುವರಿದಿದ್ದು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ.
Published: 07th February 2021 01:12 PM | Last Updated: 07th February 2021 01:19 PM | A+A A-

ಶನಿವಾರ ಗಾಜಿಪುರ್ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಭದ್ರತಾಪಡೆ
ನವದೆಹಲಿ: ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾನುವಾರ ಕೂಡ ಭಾರೀ ಭದ್ರತೆ ಮುಂದುವರಿದಿದ್ದು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ.
ಚಕ್ಕಾ ಜಾಮ್ ಕಳೆದ ಒಂದು ದಿನ ನಂತರ ಇಂದು ಟಿಕ್ರಿ ಗಡಿಯ ಹತ್ತಿರ ಬ್ಯಾರಿಕೇಡ್ ಗಳ ಸಮೀಪ ಇಂದು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ರೈತರು ರಾತ್ರಿ ಹಗಲು ಇಲ್ಲಿ ತೀವ್ರ ಕಷ್ಟಪಡುತ್ತಿದ್ದು, ಸರ್ಕಾರ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು, ಆಗಲೇ ನಾವು ನಮ್ಮ ಮನೆಗಳಿಗೆ ಹೋಗಲು ಸಾಧ್ಯ. ಅಲ್ಲಿಯವರೆಗೆ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುತ್ತೇವೆ ಎಂದು ಪಂಜಾಬ್ ನ ರೈತರೊಬ್ಬರು ಹೇಳುತ್ತಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಕುಲ್ದೀಪ್ ಸಿಂಗ್ ದಂಡ, ರೈತರು ಚಕ್ಕಾ ಜಾಮ್ ನ್ನು ಶಾಂತಿಯುತವಾಗಿ ನಡೆಸಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ ಹಲವು ಜನರು ನಮ್ಮ ಪರವಾಗಿ ಇದ್ದಾರೆ, ನಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೃಢವಾಗಿ ನಿಲ್ಲಬೇಕಷ್ಟೆ, ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿ-ಉತ್ತರ ಪ್ರದೇಶದ ಗಾಜಿಪುರ್ ಗಡಿಯಲ್ಲಿ ರೈತರ ಪ್ರತಿಭಟನೆ ಇಂದು 72ನೇ ದಿನಕ್ಕೆ ಕಾಲಿಟ್ಟಿದೆ.