ಉತ್ತರಾಖಂಡ ಹಿಮಸ್ಫೋಟ: ಒಂದು ಫೋನ್ ಕಾಲ್ ಹೇಗೆ ಜೀವ ಉಳಿಸಿತು ಗೊತ್ತಾ? ರಕ್ಷಿಸಲ್ಪಟ್ಟ ಕಾರ್ಮಿಕರ ಅನುಭವ!
ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದಾಗಿ ಸುರಂಗದೊಳಗೆ ಸಿಲುಕಿದ್ದವರು ಒಂದು ಫೋನ್ ಕರೆಯಿಂದ ವಿಸ್ಮಯ ರೀತಿಯಲ್ಲಿ ಬದುಕುಳಿದಿದ್ದಾರೆ.
Published: 08th February 2021 06:01 PM | Last Updated: 08th February 2021 06:35 PM | A+A A-

ರಕ್ಷಣಾ ಕಾರ್ಯಾಚರಣೆ
ಜೋಶಿಮಠ: ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದಾಗಿ ಸುರಂಗದೊಳಗೆ ಸಿಲುಕಿದ್ದವರು ಒಂದು ಫೋನ್ ಕರೆಯಿಂದ ವಿಸ್ಮಯ ರೀತಿಯಲ್ಲಿ ಬದುಕುಳಿದಿದ್ದಾರೆ.
ಹೌದು. ತಪೋವನ ಬಳಿಯ ಸುರಂಗದೊಳಗೆ ಸಿಲುಕಿದ್ದವರು ಬದುಕಿನ ಭರವಸೆ ಕಳೆದುಕೊಂಡಂತಹ ಸಂದರ್ಭದಲ್ಲಿ ಮೊಬೈಲ್ ಫೋನ್ ಕೆಲಸ ಮಾಡುತ್ತಿರುವುದನ್ನು ಒಬ್ಬರು ಗುರುತಿಸಿದ್ದಾರೆ. ಅದರ ನೆರವಿನಿಂದ ರಕ್ಷಣಾ ತಂಡವನ್ನು ಸಂಪರ್ಕಿಸಿ, ಸುರಂಗದಿಂದ ಮೇಲೆ ಬಂದಿದ್ದಾರೆ.
ಸುರಂಗದಿಂದ ಮೇಲೆ ಬರುವಂತೆ ಹೇಳುತ್ತಿದ್ದ ಜನರ ಕಿರುಚಾಟ ಕೇಳುತಿತ್ತು. ಆದರೆ. ನಾವು ಪ್ರತಿಕ್ರಿಯಿಸುವ ಮೊದಲೇ, ಇದ್ದಕ್ಕಿದ್ದಂತೆ ನೀರು ಮತ್ತು ಭಾರವಾದ ಹೂಳು ನಮ್ಮ ಮೇಲೆ ನುಗ್ಗಿತು ಎಂದು ರಕ್ಷಣಾ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ತಪೋವನ ವಿದ್ಯುತ್ ಯೋಜನೆ ಕಾರ್ಮಿಕ ಲಾಲ್ ಬಹದ್ದೂರ್ ಹೇಳಿದ್ದಾರೆ. ಅವರೊಂದಿಗೆ ಇತರ 11 ಮಂದಿ ಕಾರ್ಮಿಕರನ್ನು ಇಂಡೋ- ಟಿಬಿಟಿಯನ್ ಗಡಿ ಪೊಲೀಸರು ಸೋಮವಾರ ಸಂಜೆ ಚಿಮೋಲಿ ಜಿಲ್ಲೆಯ ಸುರಂಗದಿಂದ ಮೇಲಕೆತ್ತಿ ರಕ್ಷಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಏಳು ಗಂಟೆಗಳ ಕಾಲ ಸತತವಾಗಿ ಕಾರ್ಯಾಚರಣೆ ನಡೆಸಿ, ಸುರಂಗದಲ್ಲಿ ಸಿಲುಕಿದವನ್ನು ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದಿಂದ ರಕ್ಷಿಸಲ್ಪಟ್ಟವರು ಘಟನೆ ನಡೆದ ಸ್ಥಳದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಜೋಶಿಮಠದಲ್ಲಿನ ಐಟಿಬಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರು ತಮ್ಮ ಮೇಲೆ ಹರಿದಾಗ ಸುರಂಗದೊಳಗೆ 300 ಮೀಟರ್ ಆಳಕ್ಕೆ ಇಳಿದಿದ್ದೇವು.ಐಟಿಬಿಪಿ ಸಿಬ್ಬಂದಿ ತಮನ್ನು ರಕ್ಷಿಸಿದ್ದಾಗಿ ನೇಪಾಳದ ನಿವಾಸಿ ಬಸಂತ್ ಹೇಳಿದರು.
ನಾವು ಭರವಸೆ ಕಳೆದುಕೊಂಡಿದ್ದೇವು. ಆದರೆ ನಂತರ ನಾವು ಸ್ವಲ್ಪ ಬೆಳಕನ್ನು ನೋಡಿದೆವು ಮತ್ತು ಉಸಿರಾಡಲು ಸ್ವಲ್ಪ ಗಾಳಿಯೂ ಸಿಕ್ಕಿತ್ತು. ಇದ್ದಕ್ಕಿದ್ದಂತೆ ನಮ್ಮಲ್ಲಿ ಒಬ್ಬರು ತನ್ನ ಮೊಬೈಲ್ ನೆಟ್ವರ್ಕ್ ಇರುವುದನ್ನು ಕಂಡುಕೊಂಡರು, ನಂತರ ಅವರು ಜನರಲ್ ಮ್ಯಾನೇಜರ್ಗೆ ಕರೆ ಮಾಡಿ ನಮ್ಮ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿದರು.
ವಿದ್ಯುತ್ ಯೋಜನೆಯ ಜನರಲ್ ಮ್ಯಾನೇಜರ್ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಕೋರಿಕೆ ಮೇರಿಗೆ ಐಟಿಬಿಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಸಿಲುಕಿದವರನ್ನು ಬದುಕಿಸಿದ್ದಾರೆ. ರೈನಿ ಸೇತುವೆಯ ಆಚೆಗೆ ಒಂಬತ್ತು ಹಳ್ಳಿಗಳಿವೆ. ನಮ್ಮ ನೆಲೆಯಿಂದ ಅವರನ್ನು ಕಳುಹಿಸಿದ ನಂತರ ಹೆಲಿಕಾಪ್ಟರ್ ಗಳಲ್ಲಿ ಆಹಾರ ಪೂರೈಸಲಾಗುತ್ತಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ದೆಹಲಿಯಲ್ಲಿ ತಿಳಿಸಿದ್ದಾರೆ.