ಟ್ರಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಪುಡಿ ಪುಡಿ: ನಿರೂಪಕಿ ಸೇರಿದಂತೆ ಮೂವರ ದುರ್ಮರಣ!
ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಳೆದ ರಾತ್ರಿ ನಿರೂಪಕಿ, ಡಿಜೆ ಸೇರಿದಂತೆ ಮೂವರು ಬೈಕ್ ನಲ್ಲಿ ಹಿಂದಿರುಗುತ್ತಿದ್ದಾಗ ಟ್ರಕ್ ನ ಟ್ರಾಲಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮೂವರು ದುರ್ಮರಣ ಹೊಂದಿದ್ದಾರೆ.
Published: 08th February 2021 08:09 PM | Last Updated: 08th February 2021 08:09 PM | A+A A-

ಖುಷ್ಬೂ-ವೀರೇಂದ್ರ
ಜೈಪುರ: ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಳೆದ ರಾತ್ರಿ ನಿರೂಪಕಿ, ಡಿಜೆ ಸೇರಿದಂತೆ ಮೂವರು ಬೈಕ್ ನಲ್ಲಿ ಹಿಂದಿರುಗುತ್ತಿದ್ದಾಗ ಟ್ರಕ್ ನ ಟ್ರಾಲಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮೂವರು ದುರ್ಮರಣ ಹೊಂದಿದ್ದಾರೆ.
ರಾಜಸ್ಥಾನದ ಚಿತ್ತೋಡಗಢ ಜಿಲ್ಲೆಯ ಗಂಗನಗರದ ಬಳಿ ಘಟನೆ ನಡೆದಿದೆ. ನಿರೂಪಕಿಯಾಗಿರುವ ಶಹಜಾದ್ ಉರ್ಫ್ ಖುಷ್ಬೂ, ಡಿಜೆ ಸೌಂಡಿಂಗ್ ಮಾಡುತ್ತಿದ್ದು ವೀರೇಂದ್ರ ಮತ್ತು ಆಶೀಷ್ ಮೃತ ದುರ್ದೈವಿಗಳು.
ಬಿಲ್ವಾಡ ನಿವಾಸಿಗಳಾಗಿರುವ ಮೂವರು ಕಳೆದ ರಾತ್ರಿ ಖಾಸಗಿ ಕಾರ್ಯಕ್ರಮ ನಿಮಿತ್ತ ಚಿತ್ತೋಡಗಢದಿಂದ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಮೃತರು 22 ರಿಂದ 25 ವರ್ಷದೊಳಗಿನವರು ಎಂದು ವರದಿಯಾಗಿದೆ.