ಬಿಹಾರ ಸಂಪುಟ ವಿಸ್ತರಣೆ: ಶಹನವಾಜ್ ಹುಸೇನ್ ಸೇರಿ ಆರು ಸಚಿವರಿಂದ ಪ್ರಮಾಣವಚನ ಸ್ವೀಕಾರ

ಕಳೆದ ತಿಂಗಳು ಬಿಹಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಹನಾವಾಜ್ ಹುಸೇನ್ ಅವರು ನಿತೀಶ್ ಕುಮಾರ್ ಸಂಪುಟದ ನೂತನ ಸಚಿವರಾಗಿ...

Published: 09th February 2021 04:15 PM  |   Last Updated: 09th February 2021 04:15 PM   |  A+A-


Shahnawaz Hussain

ಶಹನವಾಜ್ ಹುಸೇನ್

Posted By : Lingaraj Badiger
Source : PTI

ಪಾಟ್ನಾ: ಕಳೆದ ತಿಂಗಳು ಬಿಹಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಹನವಾಜ್ ಹುಸೇನ್ ಅವರು ನಿತೀಶ್ ಕುಮಾರ್ ಸಂಪುಟದ ನೂತನ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ರಾಜ್ ಭವನದಲ್ಲಿ ನಡೆದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ರಾಜ್ಯಪಾಲ ಫಾಗು ಚೌಹಾನ್ ಅವರು ಮೊದಲು ಶಹನವಾಜ್ ಹುಸೇನ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ನಂತರ ಜೆಡಿಯು ನಾಯಕರಾದ ಸಂಜಯ್ ಕುಮಾರ್ ಜಾ, ಶ್ರವಣ್ ಕುಮಾರ್, ಲೆಸಿ ಸಿಂಗ್ ಮತ್ತು ಮದನ್ ಸಾಹ್ನಿ, ಹಾಗೂ ಬಿಜೆಪಿಯ ಪ್ರಮೋದ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಐವರು ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದರು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp