ಟ್ವಿಟರ್ ಗೆ ಪರ್ಯಾಯವಾಗಿ 'ಕೂ' ಆ್ಯಪ್‌ ಗೆ ಭಾರಿ ಬೇಡಿಕೆ; ಡೌನ್ ಲೋಡ್ ಸಂಖ್ಯೆ ಏರಿಕೆ!

ರೈತರ ಪ್ರತಿಭಟನೆ ವಿಷಯದಲ್ಲಿ ದಾರಿ ತಪ್ಪಿಸುವಂತಹ ಟ್ವೀಟ್ ಮಾಡುತ್ತಿದ್ದವರ ಖಾತೆಗಳೆಡೆಗೆ ಟ್ವಿಟರ್ ಕಠಿಣ ಕ್ರಮ ಕೈಗೊಳ್ಳದ ಬೆನ್ನಲ್ಲೇ ಬೆಂಗಳೂರು ಮೂಲದ ದೇಶಿ ಸಾಮಾಜಿಕ ಜಾಲತಾಣ ಆ್ಯಪ್‌ ಕೂಗೆ ಬೇಡಿಕೆ ಹೆಚ್ಚಿದೆ. 

Published: 10th February 2021 11:25 PM  |   Last Updated: 10th February 2021 11:25 PM   |  A+A-


A Koo in cyberspace! Desi micro-blogging app sees surge in downloads

ಟ್ವಿಟರ್ ಗೆ ಪರ್ಯಾಯವಾಗಿ 'ಕೂ' ಆ್ಯಪ್‌ ಗೆ ಭಾರಿ ಬೇಡಿಕೆ; ಡೌನ್ ಲೋಡ್ ಸಂಖ್ಯೆ ಏರಿಕೆ!

Posted By : Srinivas Rao BV
Source : The New Indian Express

ಬೆಂಗಳೂರು: ರೈತರ ಪ್ರತಿಭಟನೆ ವಿಷಯದಲ್ಲಿ ದಾರಿ ತಪ್ಪಿಸುವಂತಹ ಟ್ವೀಟ್ ಮಾಡುತ್ತಿದ್ದವರ ಖಾತೆಗಳೆಡೆಗೆ ಟ್ವಿಟರ್ ಕಠಿಣ ಕ್ರಮ ಕೈಗೊಳ್ಳದ ಬೆನ್ನಲ್ಲೇ ಬೆಂಗಳೂರು ಮೂಲದ ದೇಶಿ ಸಾಮಾಜಿಕ ಜಾಲತಾಣ ಆ್ಯಪ್‌ ಕೂಗೆ ಬೇಡಿಕೆ ಹೆಚ್ಚಿದೆ. ಕೇಂದ್ರ ಸಚಿವರು, ರಾಜಕಾರಣಿಗಳು ಖ್ಯಾತನಾಮರು, ಜನಸಾಮಾನ್ಯರು ಟ್ವಿಟರ್ ನಿಂದ ಕೂ' ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. 
 
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈಗಾಗಲೇ ಕೂ' ಆ್ಯಪ್‌ ನಲ್ಲಿ ಖಾತೆ ತೆರೆದಿದ್ದು, ಕೇಂದ್ರ ರೈಲ್ವೆ, ವಾಣಿಜ್ಯ, ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಕೂ' ಆ್ಯಪ್‌ ನಲ್ಲಿ ಖಾತೆ ಹೊಂದಿದ್ದಾರೆ. ಅಷ್ಟೇ ಅಲ್ಲದೇ, ಭಾರತೀಯ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ' ಮೂಲಕ ನನ್ನೊಂದೊಗೆ ಸಂಪರ್ಕದಲ್ಲಿರಿ ಎಂದೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. 

ನೀತಿ ಆಯೋಗ ಸಹ ಕೂ ನಲ್ಲಿ ಸಕ್ರಿಯವಾಗಿದ್ದು, ಕೂ' ಆ್ಯಪ್‌ ಸಾಮಾಜಿಕ ವಿಭಾಗದ ಆತ್ಮನಿರ್ಭರ ಭಾರತ ಆ್ಯಪ್‌ ಆಗಿದೆ ಎಂದು ಬಣ್ಣಿಸಿದೆ. 2020 ರಲ್ಲಿ ಕೂ'ಆ್ಯಪ್‌ ಗೂಗಲ್ ಪ್ಲೇ ಸ್ಟೋರ್ ನಲ್ಲಿ ದೈನಂದಿನ ಬಳಕೆಯ ಅತ್ಯುತ್ತಮ ಆ್ಯಪ್‌ ಎಂಬ ಮೆಚ್ಚುಗೆ ಗಳಿಸಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಉಲ್ಲೇಖಿಸಿದ್ದರು. 

ಕೂ'ಆ್ಯಪ್‌ ನ ಸಹ-ಸಂಸ್ಥಾಪಕ ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಸ್ಥಳೀಯ ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಜಾಲವನ್ನು ಬೆಳೆಸುವುದು ಮುಖ್ಯ ಎಂಬುದನ್ನು ನಾವು ನಂಬಿದ್ದೇವೆ. ಭಾರತದ ಬಗ್ಗೆ ಕೂ'ಆ್ಯಪ್‌ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಕೂ'ಆ್ಯಪ್‌ ನ್ನು ಮಾ.2020 ರಲ್ಲಿ ಸ್ಥಾಪಿಸಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp