ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಪ್ರತಿಭಟನಾ ನಿರತ ರೈತರ ಗುರಿಯಲ್ಲ: ಟಿಕಾಯತ್

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆ ವಿರೋಧಿ ಹೋರಾಟವನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. 

Published: 10th February 2021 08:18 PM  |   Last Updated: 10th February 2021 08:19 PM   |  A+A-


Bharatiya Kisan Union leader Rakesh Tikait (Photo | PTI)

ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಪ್ರತಿಭಟನಾ ನಿರತ ರೈತರ ಗುರಿಯಲ್ಲ: ಟಿಕಾಯತ್

Posted By : Srinivas Rao BV
Source : The New Indian Express

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆ ವಿರೋಧಿ ಹೋರಾಟವನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. 

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿರುವ ರಾಕೇಶ್ ಟಿಕಾಯತ್ " ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಮಾಡುವುದು ಪ್ರತಿಭಟನಾ ನಿರತ ರೈತರ ಗುರಿಯಾಗಿಲ್ಲ. ಬದಲಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ. 
 
"ರೈತ ನಾಯಕರ ಪೈಕಿ ಹಲವರು ಕೃಷಿ ಕಾಯ್ದೆ ವಿರೋಧಿ ಚಳುವಳಿಯನ್ನು ದೇಶಾದ್ಯಂತ ವಿಸ್ತರಿಸಲು ಸಂಚರಿಸಲಿದ್ದಾರೆ" ಎಂದು ಟಿಕಾಯತ್ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಹೋರಾಟ ವಿಸ್ತರಿಸುತ್ತಲೇ ಇರಲಿದೆ ಎಂದು ಟಿಕಾಯತ್ ಹೇಳಿದ್ದಾರೆ. 

"ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಮಾಡುವುದು ನಮ್ಮ ಗುರಿಯಲ್ಲ, ಸರ್ಕಾರ ಅದರ ಕೆಲಸ ಮಾಡಬೇಕು, ಆದರೆ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು, ಎಂಎಸ್ ಪಿ ಕಾನೂನನ್ನು ಖಾತ್ರಿಪಡಿಸುವುದಷ್ಟೇ ನಮಗೆ ಬೇಕಾಗಿರುವುದು"ಎಂದು ಅವರು ತಿಳಿಸಿದ್ದಾರೆ. ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸುವವರೆಗೂ ಪ್ರತಿಭಟನೆಯನ್ನು ವಿಸ್ತರಿಸಲಾಗುತ್ತದೆ. ಸಂಯುಕ್ತ ಕಿಸಾನ್ ಮೋರ್ಚ ಒಗ್ಗಟ್ಟಿನಿಂದಲೇ ಇದೆ. ಸರ್ಕಾರ ಭ್ರಮೆಯಲ್ಲಿರುವುದು ಬೇಡ ಎಂದು ಟಿಕಾಯತ್ ಎಚ್ಚರಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp