ಈಶಾನ್ಯ ಲಡಾಖ್ ನಲ್ಲಿ ಭಾರತ, ಚೀನಾ ಗಡಿ ಟ್ರೂಪ್ ಗಳಿಂದ ಸೇನಾ ಸಿಬ್ಬಂದಿ ಹಿಂತೆಗೆತ: ಚೀನಾ ರಕ್ಷಣಾ ಸಚಿವಾಲಯ

ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ನ ದಕ್ಷಿಣ ಹಾಗೂ ಉತ್ತರ ತೀರಗಳಿಂದ ಚೀನಾ, ಭಾರತ ಮುನ್ನೆಲೆ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುತ್ತಿರುವುದಾಗಿ ಚೀನಾ ರಕ್ಷಣಾ ಸಚಿವಾಲಯ ಹೇಳಿದೆ. 

Published: 10th February 2021 07:12 PM  |   Last Updated: 10th February 2021 07:12 PM   |  A+A-


The two countries have held several rounds of military and diplomatic-level talks to resolve the face-off. (File Photo)

ಲಡಾಖ್ ಗಡಿಯಲ್ಲಿ ಭಾರತೀಯ ಯೋಧರು (ಸಂಗ್ರಹ ಚಿತ್ರ)

Posted By : Srinivas Rao BV
Source : The New Indian Express

ಬೀಜಿಂಗ್: ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ನ ದಕ್ಷಿಣ ಹಾಗೂ ಉತ್ತರ ತೀರಗಳಿಂದ ಚೀನಾ, ಭಾರತ ಮುನ್ನೆಲೆ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುತ್ತಿರುವುದಾಗಿ ಚೀನಾ ರಕ್ಷಣಾ ಸಚಿವಾಲಯ ಹೇಳಿದೆ. 

ಈ ಬಗ್ಗೆ ಮಾತನಾಡಿರುವ ಅಲ್ಲಿನ ರಕ್ಷಣ ಸಚಿವಾಲಯದ ವಕ್ತಾರರು ಫೆ.10 ರಿಂದ ಸೇನಾ ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. 

ಚೀನಾ ಹೇಳಿಕೆಗೆ ಭಾರತದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಮಾಂಡರ್ ಮಟ್ಟದಲ್ಲಿ ಚೀನಾ-ಭಾರತದ ನಡುವೆ ನಡೆದ 9 ನೇ ಸುತ್ತಿನ ಮಾತುಕತೆ ವೇಳೆಗೆ ಸೇನಾ ಹಿಂತೆಗೆತದ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಯೋಜನೆಯ ಪ್ರಕಾರವಾಗಿ ಸೇನಾ ಹಿಂತೆಗೆತ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ ಎಂದು ಚೀನಾ ವಕ್ತಾರರು ತಿಳಿಸಿದ್ದಾರೆ. 

ಕಳೆದ ವರ್ಷ ಮೇ ತಿಂಗಳಲ್ಲಿ ಈಶಾನ್ಯ ಲಡಾಖ್ ಪ್ರಾಂತ್ಯದಲ್ಲಿ ಚೀನಾ-ಭಾರತ ಸೈನಿಕರ ನಡುವೆ ಘರ್ಷಣೆ ಉಂಟಾಗಿತ್ತು. ಈ ಬಳಿಕ ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಜ.24 ರಂದು ಚೀನಾ-ಭಾರತ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ 9 ನೇ ಸುತ್ತಿನ ಮಾತುಕತೆ ನಡೆದಿತ್ತು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp