ನಾಪತ್ತೆಯಾಗಿದ್ದ ವಿಕಿರಣಯುಕ್ತ ಸಾಧನ ಹಿಮಸುನಾಮಿಗೆ ಕಾರಣವಾಯಿತೇ? ಸ್ಥಳೀಯರ ಶಂಕೆ!

ಉತ್ತರಾಖಂಡದಲ್ಲಿ ಕಳೆದ ಭಾನುವಾರ ಸಂಭವಿಸಿದ ಘೋರ ಹಿಮಸುನಾಮಿಯ ಹಿಂದಿನ ನಿಖರ ಕಾರಣಕ್ಕೆ ಹುಡುಕಾಟ ಆರಂಭವಾಗಿದ್ದು, ಈ ನಡುವಲ್ಲೇ ನಾಪತ್ತೆಯಾಗಿದ್ದ ವಿನಾಶಕಾರಿ ವಿಕಿರಣಯುಕ್ತ ಉಪಕರಣವೇ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

Published: 10th February 2021 11:40 AM  |   Last Updated: 10th February 2021 12:53 PM   |  A+A-


Rescue workers at the entrance of the tunnel in which 37 persons are trapped

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು

Posted By : Manjula VN
Source : The New Indian Express

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕಳೆದ ಭಾನುವಾರ ಸಂಭವಿಸಿದ ಘೋರ ಹಿಮಸುನಾಮಿಯ ಹಿಂದಿನ ನಿಖರ ಕಾರಣಕ್ಕೆ ಹುಡುಕಾಟ ಆರಂಭವಾಗಿದ್ದು, ಈ ನಡುವಲ್ಲೇ ನಾಪತ್ತೆಯಾಗಿದ್ದ ವಿನಾಶಕಾರಿ ವಿಕಿರಣಯುಕ್ತ ಉಪಕರಣವೇ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಸಿಕ್ಕಿನಲ್ಲಿರುವ ಕಾಂಚನಜುಂಗ ನಂತರ ಉತ್ತರಾಖಂಡದ ನಂದಾದೇವಿ ದೇಶದ ಎರಡನೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದರ ಈ ಪರ್ವತದ ಮೇಲೆ 1965ರಲ್ಲಿ ವಿಕಿರಣಯುಕ್ತ ಉಪಕರಣವನ್ನು ಪರ್ವತಕ್ಕೆ ಸಾಗಿಸಲಾಗುತ್ತಿತ್ತು.

ಆದರೆ, ಆ ಸಂದರ್ಭದಲ್ಲಿ ಹಿಮ ಬಿರುಗಾಳಿ ಉಂಟಾಗಿ ಉಪಕರಣವನ್ನು ಬೆಟ್ಟದಲ್ಲಿಯೇ ಬಿಟ್ಟು ಅಧಿಕಾರಿಗಳು ವಾಪಸ್ ಹೋಗಿದ್ದರು. ಒಂದು ವರ್ಷ ಬಳಿಕ ಮತ್ತೆ ಆ ಸ್ಥಳಕ್ಕೆ ತೆರಳಿದಾಗ ಉಪಕರಣ ಪತ್ತೆಯಾಗಿರಲಿಲ್ಲ. ಸಾಕಷ್ಟು ಬಾರಿ ಶೋಧಿಸಿದರೂ ಸಿಕ್ಕಿರಲಿಲ್ಲ. ಇದೀಗ ಭೀಕರ ಪ್ರವಾಹಕ್ಕೆ ಆ ಉಪಕರಣವೇ ಕಾರಣ ಇರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಭಾನುವಾರ ನಿರ್ಗಲ್ಲು ಕುಸಿತ ಉಂಟಾದ ಬಳಿಕ ಪರ್ವತದಿಂದ ಧೂಳು, ಹಿಮದ ಜೊತೆಗೆ ತೀವ್ರ ಘಾಟಿನ ಗಾಳಿಯೂ ಬೀಸುತ್ತಿತ್ತು. ಅದನ್ನು ಉಸಿರಾಡಲು ಆಗುತ್ತಿರಲಿಲ್ಲ. ಬರೀ ಹಿಮ ಹಾಗೂ ಧೂಳಿನಿಂದ ಅಂತಹ ವಾಸನೆ ಬರುವುದಿಲ್ಲ. ಹೀಗಾಗಿ ವಿಕಿರಣಯುಕ್ತ ಉಪಕರಣವೇ ಈ ಘಟನೆ ಹಿಂದಿನ ಕಾರವಿದ್ದಿರಬಹುದು ಎಂದು ತಿಳಿಸಿದ್ದಾರೆ.

1965ರಲ್ಲಿ ಗುಪ್ತಚರ ಅಧಿಕಾರಿಗಳು ಉಪಕರಣ ಸಾಗಿಸುವಾಗ ಜುಗ್ಗು ಗ್ರಾಮದ ಹಲವಾರು ಮಂದಿ ಕೂಲಿಯಾಳುಗಳಾಗಿ ಕೆಲಸ ಮಾಡಿದ್ದರು. ಕೂಲಿಯಾಳುಗಳಲ್ಲಿ ಒಬ್ಬರಾಗಿದ್ದ ಕಾರ್ತಿಕ್ ಸಿಂಗ್ ಎಂಬುವವರು ಮಾತನಾಡಿ, ಆ ವೇಲೆ ನಾನು ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಉಪಕರಣ ಸಾಗಿಸಿದ ಬಳಿಕ ಕ್ಯಾಂಪ್ 4ಗೆ ತೆರಳುವಂತೆ ತಿಳಿಸಿದ್ದರು, ಈ ವೇಳೆ ಹಿಮ ಬಿರುಗಾಳಿ ಆರಂಭವಾದ ಹಿನ್ನಲೆಯಲ್ಲಿ ಯಂತ್ರವನ್ನು ಅಲ್ಲಿಯೇ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದೆವು ಎಂದು ಹೇಳಿದ್ದಾರೆ.

ವಿಕಿರಣಯುಕ್ತ ಸಾಧನ ಅತ್ಯಂತ ಅಪಯಕಾರಿಯಾದದ್ದು. ಇದರಿಂದಲೇ ಹಿಮಸುನಾಮಿಯಾಗುತ್ತಿರಬಹುದು ಎಂದು ತಿಳಿಸಿದ್ದಾರೆ.

2010ರಲ್ಲಿಯೂ ಹೋರಾಟಗಾರ ಗುರ್ವೀಂದರ್ ಸಿಂಗ್ ಚಡ್ಡಾ ಎಂಬುವವರು ಈ ಉಪಕರಣದ ಕುರಿತು ಆರ್'ಟಿಐ ಅಡಿಯಲ್ಲಿ ಮಾಹಿತಿ ಕೇಳಿದ್ದರು. ಅರ್ಜಿಯಲ್ಲಿ ರೇಡಿಯೋ ಆ್ಯಕ್ಟಿವ್ ಡಿವೈಸ್ ಸಂಬಂಧ 7 ಪ್ರಶ್ನೆಗಳನ್ನು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್, ಈ ಬಗ್ಗೆ ನಮ್ಮ ಕೇಂದ್ರದಲ್ಲಿ ಯಾವುದೇ ಮಾಹಿತಿಗಳಿಲ್ಲ. ಆರ್'ಟಿಐ ಆ್ಯಕ್ಟ್ 2005ರ ಅಲಿಯಲ್ಲಿ ನಾವು ಯಾವುದೇ ರೀತಿಯ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp