ಗಣರಾಜೋತ್ಸವ ಹಿಂಸಾಚಾರ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿ ಇಕ್ಬಾಲ್ ಸಿಂಗ್ ಬಂಧನ

ಗಣರಾಜೋತ್ಸವ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಪಟ್ಟಿಯಲ್ಲಿರುವ ಇಕ್ಬಾಲ್ ಸಿಂಗ್ ಎಂಬಾತನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

Published: 10th February 2021 11:46 AM  |   Last Updated: 10th February 2021 11:46 AM   |  A+A-


Iqbal Singh

ಇಕ್ಬಾಲ್ ಸಿಂಗ್

Posted By : Srinivasamurthy VN
Source : ANI

ನವದೆಹಲಿ: ಗಣರಾಜೋತ್ಸವ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಪಟ್ಟಿಯಲ್ಲಿರುವ ಇಕ್ಬಾಲ್ ಸಿಂಗ್ ಎಂಬಾತನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜನವರಿ 26 ರಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿ ವೇಳೆ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಇಕ್ಬಾಲ್ ಸಿಂಗ್ʼನನ್ನು ನಿನ್ನೆ ರಾತ್ರಿ ದೆಹಲಿ ಪೊಲೀಸ್ ವಿಶೇಷ ಸೆಲ್ ನ ಅಧಿಕಾರಿಗಳು ಬಂಧಿಸಿದ್ದಾರೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಇಕ್ಬಾಲ್ ಸಿಂಗ್  ಇರುವಿಕೆಯ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಇನ್ನು ಈ ಹಿಂದೆ ಈತನ ಸುಳಿವು ನೀಡಿದವರಿಗೆ 50,000 ರೂ.ಗಳ ಬಹುಮಾನವನ್ನ ನೀಡಲಾಗುವುದು ದೆಹಲಿ ಪೊಲೀಸರು ಘೋಷಿಸಿದ್ದರು. ಇದೀಗ ಈ ಬಹುಮಾನ ಯಾರಿಗೆ ಸಿಗಲಿದೆ..? ಯಾರು ಈ ಮಾಹಿತಿ ನೀಡಿದರು ಎಂಬುದ ಕುತೂಹಲ ಕೆರಳಿಸಿದೆ. ಆದರೆ ಇಕ್ಬಾಲ್ ಸಿಂಗ್ ನ ಬಂಧನ ಕುರಿತು ಪೊಲೀಸರು  ಹೆಚ್ಚಿನ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp