ಮಮತಾ ಬ್ಯಾನರ್ಜಿ ಅಧಿಕಾರದಿಂದ ಇಳಿದು ಕಮಲ ಅರಳಿದಾಗ ಮಾತ್ರ ಪಶ್ಚಿಮ ಬಂಗಾಳ ಅಭಿವೃದ್ಧಿಗೊಳ್ಳಲು ಸಾಧ್ಯ: ಜೆ.ಪಿ. ನಡ್ಡಾ

ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ಅಧಿಕಾರದಿಂದ ಕೆಳಗಿಳಿದು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಪಶ್ಚಿಮ ಬಂಗಾಳ ರಾಜ್ಯ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ.ನಡ್ಡಾ ಅವರು ಬುಧವಾರ ಹೇಳಿದ್ದಾರೆ.

Published: 10th February 2021 12:48 PM  |   Last Updated: 10th February 2021 12:54 PM   |  A+A-


Jp Nadda

ಜೆಪಿ ನಡ್ಡಾ

Posted By : Manjula VN
Source : ANI

ಖರಗ್ಪುರ: ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ಅಧಿಕಾರದಿಂದ ಕೆಳಗಿಳಿದು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಪಶ್ಚಿಮ ಬಂಗಾಳ ರಾಜ್ಯ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ.ನಡ್ಡಾ ಅವರು ಬುಧವಾರ ಹೇಳಿದ್ದಾರೆ.

ಖರಗ್ಪುರದಲ್ಲಿ ಆಯೋಜನೆಗೊಳಿಸಲಾಗಿರುವ ಚಾ ಚಕ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಪಶ್ಚಿಮಬಂಗಾಳವನ್ನು ಅಭಿವೃದ್ಧಿಗೊಳಿಸಲು ಪ್ರಧಾನಿ ಮೋದಿಯವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಮಮತಾ ಬ್ಯಾನರ್ಜಿಯವರು ತಮ್ಮ ಸರ್ವಾಧಿಕಾರದ ಮೂಲಕ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಬಂಗಾಳದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಮಲ ಅರಳಿದ್ದೇ ಆದರೆ, ಪಶ್ಚಿಮ ಬಂಗಾಳ ಅಭಿವೃದ್ಧಿಗೊಳ್ಳಲಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ರಿಫೈನರಿ ಯೋಜನೆಗೆ ರೂ.4,700 ಕೋಟಿ ಮೀಸಲಿರಿಸಿದ್ದರು. ಹೆದ್ದಾರಿಗಳಿಗಾಗಿ ರೂ.25,000 ಕೋಟಿ ಮೀಸಲಿಟ್ಟಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಅಭಿವೃದ್ಧಿಗಳು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದವರ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಸರ್ಕಾರ ಏನನ್ನೂ ಮಾಡಲಿಲ್ಲ. ಬಡವರಿಗೆ ಅನ್ಯಾಯ ಮಾಡಿದ ಸರ್ಕಾರ ದೀರ್ಘಕಾಲದವರೆಗೆ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸೋಲಲೇ ಬೇಕು. ಕಮಲ ಅರಳಲೇಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಜನರಿಗೆ ಸಿಗದಂತೆ ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಗಳ ಲಾಭಗಳು ರೈತರಿಗೆ ತಲುಪುತ್ತಿಲ್ಲ. ಈ ಎಲ್ಲಾ ಯೋಜನೆಗಳು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ತಲುಪಿದೆ ಎಂದು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp