ನಮ್ಮ ಕಾನೂನು ಅನುಸರಿಸಿ, ಅಶಾಂತಿ ಸೃಷ್ಟಿಸುವ ಅಭಿಯಾನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಟ್ವಿಟರ್ ಗೆ ಭಾರತ ಸೂಚನೆ

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಚೋದನಾಕಾರಿ ಅಂಶಗಳು ಮತ್ತು ತಪ್ಪು ಮಾಹಿತಿ  ಹರಡುತ್ತಿರುವ ಹ್ಯಾಷ್ ಟಾಗ್ ಗಳು ಮತ್ತು ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಟ್ವಿಟರ್ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

Published: 11th February 2021 12:43 PM  |   Last Updated: 11th February 2021 01:16 PM   |  A+A-


Twitter_CEO_Jack_Dorsey1

ಟ್ವಿಟರ್ ಸಿಇಒ ಜಾಕ್ ಡೊರ್ಸ್

Posted By : Nagaraja AB
Source : The New Indian Express

ನವದೆಹಲಿ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಚೋದನಾಕಾರಿ ಅಂಶಗಳು ಮತ್ತು ತಪ್ಪು ಮಾಹಿತಿ  ಹರಡುತ್ತಿರುವ ಹ್ಯಾಷ್ ಟಾಗ್ ಗಳು ಮತ್ತು ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಟ್ವಿಟರ್ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಟ್ವಿಟರ್ ಸಂಸ್ಥೆ ತನ್ನ ನಿಯಮಗಳನ್ನು ಲೆಕ್ಕಿಸದೆ,  ದೇಶದಲ್ಲಿನ ನಿಯಮಗಳನ್ನು ಅನುಸರಿಸಬೇಕೆಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಟ್ವಿಟರ್ 500 ಖಾತೆಗಳನ್ನು ಅಮಾನತುಪಡಿಸಿದ್ದು, ಭಾರತದೊಳಗೆ ಇತರ ಅನೇಕ ಖಾತೆಗಳನ್ನು ನಿರ್ಬಂಧಿಸಿದೆ. ಈ ಮಧ್ಯೆ ಸುದ್ದಿ ಮಾಧ್ಯಮ ಘಟಕಗಳು, ಪತ್ರಕರ್ತರು, ಹೋರಾಟಗಾರರು ಮತ್ತು ರಾಜಕಾರಣಿಗಳ ಖಾತೆಗಳನ್ನು ನಿರ್ಬಂಧಿಸಲು ನಿರಾಕರಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಅಗತ್ಯವನ್ನು ಉಲ್ಲೇಖಿಸಿದೆ.

ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಮತ್ತು ಟ್ವಿಟರ್ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವೆ ನಡೆದ ವರ್ಚುಯಲ್ ಸಂವಾದದಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರ ಘಟಕವಾಗಿ ದೇಶದಲ್ಲಿನ ಕಾನೂನುಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಗೌರವ ಕೊಡಬೇಕು ಮತ್ತು ಅಶಾಂತಿಯನ್ನುಂಟು ಮಾಡುವ ಅಭಿಯಾನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ, ಟ್ವಿಟರ್ ಸಂಸ್ಥೆಗೆ ಸೂಚಿಸಿದೆ.

ಅಮೆರಿಕಾದ ಕ್ಯಾಪಿಟಲ್ ಕಟ್ಟಡ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡಿದ್ದ ಟ್ವಿಟರ್, ಕೆಂಪುಕೋಟೆಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆರೋಪಿಸಿದೆ. 

ಸೌಹಾರ್ದಯತೆ ಕೆಡಿಸಲು, ಅಶಾಂತಿಯನ್ನುಂಟು ಮಾಡಲು ಟ್ವಿಟರ್ ನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ವೀಕಾರಾರ್ಹವಲ್ಲ.ದೇಶದಲ್ಲಿನ ಕಾನೂನುಗಳನ್ನು ಪಾಲಿಸುವ ಮೂಲಕ ಇಂತಹ ಸಂಘಟಿತ ಅಭಿಯಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಸಂಸ್ಥೆಗೆ ತಿಳಿಸಿರುವುದಾಗಿ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ. ಸಭೆಯ ಬಗ್ಗೆ ಟ್ವಿಟರ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp