ಭಾರತ ಸ್ವಾವಲಂಭಿಯಾಗಬೇಕೆಂದು ದೀನ್ ದಯಾಳ್ ಉಪಾಧ್ಯಾಯ ಅವರು 5 ದಶಕಗಳ ಹಿಂದೆಯೇ ಬಯಸಿದ್ದರು: ಪ್ರಧಾನಿ ಮೋದಿ

ಭಾರತ ದೇಶ ಕಂಡ ಅತ್ಯಂತ ಸಜ್ಜನ, ಸರಳ, ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದ ರಾಜಕಾರಣಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ. ಅವರ ಏಕಾತ್ಮ ಮಾನವ ದರ್ಶನ ವಿಚಾರ ಭಾರತೀಯರಿಗೆ ಪ್ರೇರಣೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Published: 11th February 2021 12:38 PM  |   Last Updated: 11th February 2021 01:13 PM   |  A+A-


Floral tribute to Pandit Deen Dayal Upadhyay

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಗೆ ಮಾಲಾರ್ಪಣೆ

Posted By : Sumana Upadhyaya
Source : ANI

ನವದೆಹಲಿ: ಭಾರತ ದೇಶ ಕಂಡ ಅತ್ಯಂತ ಸಜ್ಜನ, ಸರಳ, ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದ ರಾಜಕಾರಣಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ. ಅವರ ಏಕಾತ್ಮ ಮಾನವ ದರ್ಶನ ವಿಚಾರ ಭಾರತೀಯರಿಗೆ ಪ್ರೇರಣೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ಜನ ಸಂಘದ ಮಾಜಿ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಅಂಗವಾಗಿ ದೆಹಲಿಯಲ್ಲಿಂದು ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛವಿರಿಸಿ, ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತ ಶಸ್ತ್ರಾಸ್ತ್ರಗಳಿಗೆ ವಿದೇಶಗಳನ್ನು ಅವಲಂಬಿಸಿತ್ತು. ಆಗ ದೀನ್ ದಯಾಳ್ ಉಪಾಧ್ಯಾಯ ಅವರು, ಭಾರತ ಕೇವಲ ಕೃಷಿ ಮಾತ್ರವಲ್ಲದೆ, ರಕ್ಷಣಾ ಸಾಮಗ್ರಿ, ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸ್ವಾವಲಂಭಿಯಾಗಬೇಕೆಂದು ಹೇಳಿದ್ದರು. ಇಂದು, ಭಾರತವು ರಕ್ಷಣಾ ಕಾರಿಡಾರ್‌ಗಳನ್ನು, ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳು ಮತ್ತು ತೇಜಸ್‌ನಂತಹ ಯುದ್ಧ ವಿಮಾನಗಳನ್ನು ಹೊಂದುವಷ್ಟು ಬೆಳೆದಿದೆ ಎಂದರು. 

ದೀನ್‌ದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನ ವಿಚಾರ, ಭಾರತದ ರಾಜಕಾರಣದಲ್ಲಿ ಕಂಡುಬರುವ ಅಪರೂಪದ ಆದರ್ಶ. ದೀನ್‌ದಯಾಳ್ ಉಪಾಧ್ಯಾಯ ನಮಗೆ ಅಪಾರ ಸೈದ್ಧಾಂತಿಕ ಭಂಡಾರವನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶ ರಾಜಕಾರಣದ ಹಾದಿಯಲ್ಲಿ ನಾವೆಲ್ಲಾ ಮುನ್ನಡೆದು ಅವರ ಕನಸುಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳೋಣ ಎಂದು ಬಿಜೆಪಿ ಸಂಸದರಿಗೆ ಕರೆ ನೀಡಿದರು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp