ಸೇನಾ ನಿಷ್ಕ್ರಿಯತೆ ಒಪ್ಪಂದ: ಲಡಾಕ್‌ ಗಡಿಯಿಂದ ಹಿಂದೆ ಸರಿದ ಚೀನಾ, ವಿಡಿಯೋ!

ಪೂರ್ವ ಲಡಾಕ್‌ನಲ್ಲಿ ಸೇನಾ ನಿಷ್ಕ್ರಿಯಗೊಳಿಸುವ ಭಾರತ-ಚೀನಾ ಒಪ್ಪಂದದ ಪ್ರಕಾರ, ಚೀನಾ ತನ್ನ ಸೈನ್ಯವನ್ನು ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿರುವ ಫಿಂಗರ್ 8...

Published: 11th February 2021 06:14 PM  |   Last Updated: 11th February 2021 07:03 PM   |  A+A-


Pangong

ಪ್ಯಾಂಗಾಂಗ್ ಸರೋವರx

Posted By : Lingaraj Badiger
Source : PTI

ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಸೇನಾ ನಿಷ್ಕ್ರಿಯಗೊಳಿಸುವ ಭಾರತ-ಚೀನಾ ಒಪ್ಪಂದದ ಪ್ರಕಾರ, ಚೀನಾ ತನ್ನ ಸೈನ್ಯವನ್ನು ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿರುವ ಫಿಂಗರ್ 8 ಪ್ರದೇಶಗಳ ಪೂರ್ವಕ್ಕೆ ಹಿಂತೆಗೆದುಕೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ.

ಇಂದು ಲಡಾಖ್ ಗಡಿ ವಸ್ತುಸ್ಥಿತಿ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್, ಪ್ಯಾಂಗಾಂಗ್ ಸರೋವರದ ತೀರದಲ್ಲಿ ಸೇನಾ ನಿಯೋಜನೆ ಬಗ್ಗೆ ಚೀನಾ ಜತೆ ಮಾತುಕತೆ ನಡೆಸಲಾಗಿದೆ. ಯಾವುದೇ ರೀತಿಯ ಸೇನಾ ಚಟುವಟಿಕೆಗಳನ್ನು ನಡೆಸದಂತೆ ಉಭಯ ರಾಷ್ಟ್ರಗಳ ಮಧ್ಯೆ ಒಪ್ಪಂದವಾಗಿದ್ದು, ಮುಂದಿನ ಹಂತದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ ಎಂದರು.

ಗಡಿನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಮತ್ತು ಭಾರತ ಒಪ್ಪಿಕೊಂಡಿವೆ, ಈ ಕುರಿತಂತೆ ಮಾತುಕತೆ ನಡೆಸಲಾಗಿದೆ. ಗಡಿಯಲ್ಲಿ ಶಾಂತಿಯುತ ಸ್ಥಿತಿಯನ್ನು ಕಾಯ್ದುಕೊಳ್ಳಲು ಮತ್ತು ದ್ವಿಪಕ್ಷೀಯ ಒಪ್ಪಂದಂತೆ ನಡೆದುಕೊಳ್ಳಲು ಭಾರತ ಯಾವತ್ತೂ ಬದ್ಧವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪೂರ್ವ ಲಡಾಖ್‌ನ ಪ್ಯಾಂಗಾಂಗ್ ನದಿ ಕಣಿವೆಯ ಮುಂಚೂಣಿ ನೆಲೆಗಳಿಂದ ಸೈನ್ಯವನ್ನು ಹಿಂಪಡೆಯಲು ಎರಡೂ ಬಣ ಒಪ್ಪಿಕೊಂಡಿದ್ದು, ಎರಡೂ ಸೇನೆ ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿವೆ ಎಂದು ರಾಜನಾಥ್ ಸಿಂಗ್ ಘೋಷಿಸಿದರು.

ಒಪ್ಪಂದದ ಪ್ರಕಾರ, ಚೀನಾ ತನ್ನ ಸೈನ್ಯ ತುಕಡಿಯನ್ನು ಉತ್ತರ ಪಾಂಗೊಂಗ್ ನದಿ ಕಣಿವೆಯ ಫಿಂಗರ್ 8ರಲ್ಲಿ ನಿಯೋಜನೆ ಮಾಡಲಿದ್ದು, ಭಾರತ ತನ್ನ ಸೈನ್ಯ ತುಕಡಿಯನ್ನು ಫಿಂಗರ್ 3ರ ಬಳಿಯ ಶಾಶ್ವತ ನೆಲೆಯಲ್ಲಿ ನಿಯೋಜನೆ ಮಾಡಲಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp