ಎಲ್ಎಸಿಯಲ್ಲಿ ಯಥಾಸ್ಥಿತಿ ಇಲ್ಲದಿದ್ದರೆ, ಶಾಂತಿ ಸ್ಥಿರತೆ ಇರುವುದಿಲ್ಲ: ರಾಹುಲ್ ಗಾಂಧಿ

ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾದೊಂದಿಗೆ ಈ ಹಿಂದಿದ್ದ ಯಥಾಸ್ಥಿತಿ ಇಲ್ಲದೇ ಇದ್ದರೆ ಶಾಂತಿ, ಸ್ಥಿರತೆಯೂ ಇರುವುದಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

Published: 11th February 2021 06:00 PM  |   Last Updated: 11th February 2021 07:02 PM   |  A+A-


Rahul_Gandhi1

ರಾಹುಲ್ ಗಾಂಧಿ

Posted By : Srinivas Rao BV
Source : The New Indian Express

ನವದೆಹಲಿ: ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾದೊಂದಿಗೆ ಈ ಹಿಂದಿದ್ದ ಯಥಾಸ್ಥಿತಿ ಇಲ್ಲದೇ ಇದ್ದರೆ ಶಾಂತಿ, ಸ್ಥಿರತೆಯೂ ಇರುವುದಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ಬಳಿ ಚೀನಾ- ಭಾರತ ಸೇನಾ ಸಿಬ್ಬಂದಿಗಳ ಹಿಂತೆಗೆತದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಯಥಾಸ್ಥಿತಿ ಕಾಯ್ದುಕೊಳ್ಳದೇ ಇದ್ದಲ್ಲಿ ಎಲ್ಎಸಿಯಲ್ಲಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಮ್ಮ ಪ್ರಾಂತ್ಯಗಳನ್ನು ಬಿಟ್ಟುಕೊಟ್ಟು ಹುತಾತ್ಮ ಯೋಧರಿಗೆ ಭಾರತ ಸರ್ಕಾರ ಅವಮಾನ ಏಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ. 

ಈಶಾನ್ಯ ಲಡಾಖ್ ನಲ್ಲಿ ಚೀನಾ- ಭಾರತ ಸೈನಿಕರ ನಡುವೆ ಘರ್ಷಣೆಯ ಪರಿಣಾಮವಾಗಿ ಉಂಟಾಗಿದ್ದ ಪಕ್ಷುಬ್ಧ ವಾತಾವರಣ ತಿಳಿಗೊಳಿಸುವುದಕ್ಕೆ ಸಂಬಂಧಿಸಿದ ಒಪ್ಪಂದದ ವಿವರಗಳನ್ನು ರಾಜನಾಥ್ ಸಿಂಗ್ ಸದನದಲ್ಲಿಂದು ಮಂಡಿಸಿದರು. ಚೀನಾದೊಂದಿಗಿನ ನಿರಂತರ ಮಾತುಕತೆಯಲ್ಲಿ ದೇಶ  ಯಾವುದನ್ನೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp