
ಡಿಎಂಕೆ ಸಂಸದ ಧಯಾನಿಧಿ ಮಾರನ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ಕೋವಿಡ್ ಲಸಿಕೆ ಪಡೆಯಲಿ ಎಂದು ಡಿಎಂಕೆ ಪಕ್ಷದ ಲೋಕಸಭಾ ಸದಸ್ಯ ದಯಾನಿಧಿ ಮಾರನ್ ಆಗ್ರಹಿಸಿದ್ದಾರೆ. ಹಲವು ಜನರು ಲಸಿಕೆಯನ್ನು ನಂಬದ ಕಾರಣ, ಅವರಲ್ಲಿ ವಿಶ್ವಾಸ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಲಸಿಕೆ ಪಡೆಯಲಿ ಎಂದಿದ್ದಾರೆ.
ಲೋಕಸಭೆಯಲ್ಲಿ 2021-22 ನೇ ಸಾಲಿನ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಲ್ಲದೇ, ರಾಷ್ಟ್ರಪತಿ, ಗೃಹ ಸಚಿವರು, ರಕ್ಷಣಾ ಸಚಿವರು ಕೂಡಾ ಸಾರ್ವಜನಿಕವಾಗಿ ಕೊರೋನಾ ಲಸಿಕೆ ಪಡೆಯಬೇಕು ಎಂದರು.
ಕೊರೋನಾ ಲಸಿಕೆ ಬಗ್ಗೆ ಸಮಾಧಾನವಿಲ್ಲ, ಲಸಿಕೆ ದಕ್ಷತೆಯ ಕಾರಣದಿಂದಾಗಿ ಅದರ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ ಮಾರನ್, ಅಮೆರಿಕ ಅಧ್ಯಕ್ಷ ಜೋ-ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಾರ್ವಜನಿಕವಾಗಿ ಲಸಿಕೆ ಪಡೆದಿರುವುದನ್ನು ಉಲ್ಲೇಖಿಸಿದರು.
ಇಂಗ್ಲೆಂಡ್ ರಾಜ ಫಿಲಿಪ್ ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾರ್ವಜನಿಕವಾಗಿ ಲಸಿಕೆ ಪಡೆದಿರುವುದನ್ನು ತಿಳಿಸಿದರು.
ಅಮೆರಿಕದ ಮಾದರಿಯಂತೆ ಪ್ರಧಾನಿ, ರಾಷ್ಟ್ರಪತಿ, ಗೃಹ, ರಕ್ಷಣಾ ಸಚಿವರು ಸಾರ್ವಜನಿಕವಾಗಿ ಲಸಿಕೆ ಪಡೆಯಬೇಕು, ಇದರಿಂದ ಜನರಲ್ಲಿ ನಂಬಿಕೆ ಬರಲಿದೆ ಎಂದು ಧಯಾನಿಧಿನ್ ಮಾರನ್ ಹೇಳಿದರು.