ತೆಲಂಗಾಣದ ಬೆಡಗಿ ಮಾನಸ ವಾರಣಾಸಿ ಮುಡಿಗೆ ಮಿಸ್ ಇಂಡಿಯಾ ಕಿರೀಟ

ತೆಲಂಗಾಣದ 23 ವರ್ಷದ ಬೆಡಗಿ ಮಾನಸ ವಾರಣಾಸಿ ಅವರು ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

Published: 11th February 2021 05:14 PM  |   Last Updated: 11th February 2021 05:14 PM   |  A+A-


femina

ಮಾನಸ ವಾರಣಾಸಿ, ಮಾಣಿಕಾ ಮಿಸ್ ಹಾಗೂ ಮಾನ್ಯ ಸಿಂಗ್ - Photo Credit: Twitter/feminamissindia

Posted By : Lingaraj Badiger
Source : PTI

ಹೈದರಾಬಾದ್: ತೆಲಂಗಾಣದ 23 ವರ್ಷದ ಬೆಡಗಿ ಮಾನಸ ವಾರಣಾಸಿ ಅವರು ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತೆಲಂಗಾಣದ ಎಂಜಿನಿಯರ್ ಮಾನಸ ವಾರಣಾಸಿ ಅವರು ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟವನ್ನು ತಮ್ಮದಾಗಿಸಿಕೊಂಡರು.

ಹರಿಯಾಣದ ಮಾಣಿಕಾ ಮಿಸ್ ಇಂಡಿಯಾ ಗ್ರ್ಯಾಂಡ್ 2020 ಆಗಿ ಹೊರಹೊಮ್ಮಿದರೆ, ಉತ್ತರ ಪ್ರದೇಶದ ಮಾನ್ಯ ಸಿಂಗ್ ರನ್ನರ್ ಅಪ್ ಆಗಿದ್ದಾರೆ.

ಮಾನಸ ವಾರಣಾಸಿ ಅವರು ಈ ವರ್ಷ ಡಿಸೆಂಬರ್ ನಲ್ಲಿ ನಡೆಯಲಿರುವ 70ನೇ ಮಿಸ್ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp