ಅಮೇಥಿ: ಉತ್ತರ ಪ್ರದೇಶದ ಮಾಜಿ ಸಚಿವರ ಸೋದರಳಿಯನ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ!
ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಸೋದರಳಿಯ 20 ವರ್ಷದ ಯುವಕನ ಮೃತದೇಹ ರೈಲ್ವೆ ಹಳಿ ಪಕ್ಕ ಖರೌನ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
Published: 12th February 2021 12:17 PM | Last Updated: 12th February 2021 12:50 PM | A+A A-

ಸಾಂದರ್ಭಿಕ ಚಿತ್ರ
ಅಮೇಥಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಸೋದರಳಿಯ 20 ವರ್ಷದ ಯುವಕನ ಮೃತದೇಹ ರೈಲ್ವೆ ಹಳಿ ಪಕ್ಕ ಖರೌನ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಶುಭಂ ಎಂಬ 20 ವರ್ಷದ ಯುವಕ ನಿನ್ನೆ ಸಾಯಂಕಾಲ ತನ್ನ ಮನೆಯಿಂದ ಹೊರಹೋಗಿದ್ದ. ಆದರೆ ಮನೆಗೆ ಮರಳದೆ ರೈಲ್ವೆ ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಮೇಥಿ ರೈಲ್ವೆ ಸ್ಟೇಷನ್ ಹೌಸ್ ಆಫೀಸರ್ ಶ್ಯಾಮ್ ಸುಂದರ್ ತಿಳಿಸಿದ್ದಾರೆ.
ಯುವಕನ ತಲೆ ದೇಹದಿಂದ ಪ್ರತ್ಯೇಕವಾಗಿ ಬಿದ್ದಿದೆ, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮಾಜಿ ಸಚಿವ ಪ್ರಜಾಪತಿಯವರ ಕಿರಿಯ ಸೋದರ ಜಗದೀಶ್ ಪ್ರಸಾದ್ ಪ್ರಜಾಪತಿ ಶುಭಂ ಅಮೇಥಿಯ ಪರ್ಸವ ಗ್ರಾಮದ ನಿವಾಸಿಯಾಗಿದ್ದಾರೆ. ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಪ್ರಜಾಪತಿ ಸಚಿವಯಾಗಿದ್ದರು.