ಪಾಂಗೊಂಗ್ ಸರೋವರದಿಂದ ಸೇನೆ ನಿಷ್ಕ್ರಿಯತೆ: ಇನ್ನು ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ 

ಪೂರ್ವ ಲಡಾಕ್ ನ ಗಡಿಯ ನಿಲುಗಡೆ ಸ್ಥಾನದಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾ ಆರಂಭಿಸಿದ ಒಂದು ದಿನ ನಂತರ, ಹಂತಹಂತವಾಗಿ ಸಮನ್ವಯದಿಂದ ಪರಿಶೀಲನೆ ನಡೆಸಿ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಖಚಿತಪಡಿಸಿದ್ದಾರೆ.

Published: 12th February 2021 09:15 AM  |   Last Updated: 12th February 2021 09:15 AM   |  A+A-


armoured vehicles start moving as part of disengagement in the Pangong Tsu |

ಪಾಂಗೊಂಗ್ ಟ್ಸು ತೀರದಿಂದ ಶಸ್ತ್ರಸಜ್ಜಿತ ಸೇನೆ ಹಿಂಪಡೆಯುವ ಪ್ರಕ್ರಿಯೆ

Posted By : Sumana Upadhyaya
Source : The New Indian Express

ನವದೆಹಲಿ: ಪೂರ್ವ ಲಡಾಕ್ ನ ಗಡಿಯ ನಿಲುಗಡೆ ಸ್ಥಾನದಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾ ಆರಂಭಿಸಿದ ಒಂದು ದಿನ ನಂತರ, ಹಂತಹಂತವಾಗಿ ಸಮನ್ವಯದಿಂದ ಪರಿಶೀಲನೆ ನಡೆಸಿ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಖಚಿತಪಡಿಸಿದ್ದಾರೆ.

ಚೀನಾದ ಸೇನೆ ಪಾಂಗೊಂಗ್ ಸರೋವರದ ಫಿಂಗರ್ 8 ಭಾಗಕ್ಕೆ ಸೇನೆಯನ್ನು ಹಿಂಪಡೆದರೆ, ಭಾರತೀಯ ಸೇನೆ ಧನ್ ಸಿಂಗ್ ತಾಪಾ ಪೋಸ್ಟ್, ಉತ್ತರ ತೀರ ಪ್ರದೇಶದ ಫಿಂಗರ್ 3 ಭಾಗಕ್ಕೆ ಸೇನೆಯನ್ನು ವಾಪಸ್ ಪಡೆಯಲಿದೆ.

ಪಾಂಗೊಂಗ್ ಲೇಕ್ ನ ದಕ್ಷಿಣ ತೀರದಲ್ಲಿ ಕೂಡ ಇದೇ ರೀತಿಯ ಸೇನೆ ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಎರಡೂ ಕಡೆಗಳಲ್ಲಿ ಸಂಪೂರ್ಣವಾಗಿ ಸೇನೆ ಹಿಂಪಡೆಯುವ ಪ್ರಕ್ರಿಯೆ ಇನ್ನು 10ರಿಂದ 15 ದಿನಗಳಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಾಂಪ್ರದಾಯಿಕ ಪ್ರದೇಶಗಳಿಗೆ ಗಸ್ತು ತಿರುಗುವುದು ಸೇರಿದಂತೆ ಉತ್ತರ ದಂಡೆಯಲ್ಲಿ ಎರಡೂ ಕಡೆಯಿಂದ ಮಿಲಿಟರಿ ಚಟುವಟಿಕೆಗಳ ಬಗ್ಗೆ ತಾತ್ಕಾಲಿಕ ನಿಷೇಧವನ್ನು ಹೊಂದಲು ಒಪ್ಪಲಾಗಿದೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವರು ಹೇಳಿದ್ದಾರೆ.

ಭಾರತ ಮತ್ತು ಚೀನಾ ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ಮುಂದಿನ ಸುತ್ತಿನಲ್ಲಿ ನಡೆಸಿ ಒಪ್ಪಂದಕ್ಕೆ ಬಂದ ನಂತರ ಸೇನಾಪಡೆಗಳ ಗಸ್ತು ತಿರುಗುವಿಕೆ ಆರಂಭವಾಗುತ್ತದೆ. ಸೂಕ್ಷ್ಮತೆಗಳನ್ನು ಗಮನಿಸಿದರೆ, ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು ದಿನಕ್ಕೆ ಎರಡು ಬಾರಿ ಭೇಟಿಯಾಗುತ್ತಿದ್ದಾರೆ. ಗಾಲ್ವಾನ್ ಕಣಿವೆಯಿಂದ ಹಿಂದೆ ಸರಿದಿದ್ದರೂ, ಈ ಹಿಂದೆ ಇದೇ ರೀತಿ ಸೇನೆ ಹಿಂಪಡೆದು ಮತ್ತೆ ಚೀನಾ ಸಕ್ರಿಯವಾಗಿದ್ದರಿಂದ ಈ ಬಾರಿ ಭಾರತ ಎಚ್ಚರಿಕೆ ವಹಿಸಿದೆ. 

ರೆಚೆನ್ ಲಾ ಮತ್ತು ರಝಂಗ್ ಲಾ ಪ್ರದೇಶದಲ್ಲಿ ಕೈಲಾಶ್ ವಲಯದಲ್ಲಿ ಹೆಚ್ಚಿಸಲಾಗಿದ್ದ ಮಟ್ಟವನ್ನು ತೆಗೆಯಲಾಗುತ್ತದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp