ತವಾಂಗ್ ನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ಶ್ರಮಿಸಿದ್ದ ಯೋಧನ ಸ್ಮಾರಕಕ್ಕೆ ಫೆ.14 ರಂದು ಶಂಕುಸ್ಥಾಪನೆ
ಅರುಣಾಚಲ ಪ್ರದೇಶದ ತವಾಂಗ್ ನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೇಜರ್ ರಾಲೆಂಗ್ನಾವ್ ಬಾಬ್ ಖಾಥಿಂಗ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಫೆ.14 ರಂದು ಸ್ಮಾರಕಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
Published: 13th February 2021 10:15 PM | Last Updated: 13th February 2021 10:15 PM | A+A A-

ತವಾಂಗ್ ನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ಶ್ರಮಿಸಿದ್ದ ಯೋಧನ ಸ್ಮಾರಕಕ್ಕೆ ಫೆ.14 ರಂದು ಶಂಕುಸ್ಥಾಪನೆ
ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೇಜರ್ ರಾಲೆಂಗ್ನಾವ್ ಬಾಬ್ ಖಾಥಿಂಗ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಫೆ.14 ರಂದು ಸ್ಮಾರಕಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
ತವಾಂಗ್ ನಲ್ಲಿ ಇದಕ್ಕೆ ತಯಾರಿ ನಡೆದಿದ್ದು, ಕೇಂದ್ರ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ (ನಿವೃತ್ತ) ಬಿಡಿ ಮಿಶ್ರಾ, ಮೇಜರ್ ರಾಲೆಂಗ್ನಾವ್ ಬಾಬ್ ಖಾಥಿಂಗ್ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮೇಜರ್ ರಾಲೆಂಗ್ನಾವ್ ಬಾಬ್ ಖಾಥಿಂಗ್ ಈ ಹಿಂದಿದ್ದ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ (ಎನ್ಇಎಫ್ಎ) (ಈಗಿನ ಅರುಣಾಚಲ ಪ್ರದೇಶ) ಗೆ ಸಹಾಯಕ ರಾಜಕೀಯ ಅಧಿಕಾರಿಯಾಗಿದ್ದರು. 1950 ರಲ್ಲಿ ಅಸ್ಸಾಂ ಗೌರ್ನರ್ ಜೈರಾಮ್ ದಾಸ್ ದೌಲತ್ ರಾಮ್ ಅವರ ಮೇಲ್ವಿಚಾರಣೆಯಲ್ಲಿ ತವಾಂಗ್ ನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ದಿಟ್ಟ ಕಾರ್ಯಾಚರಣೆಯನ್ನು ಕೈಗೊಂಡು ಯಶಸ್ವಿಗೊಳಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಯ ಫಲವಾಗಿ ತವಾಂಗ್ ಭಾರತಕ್ಕೆ ಸೇರ್ಪಡೆಗೊಂಡಿತ್ತು.
"ಕಲವಾಂಗ್ಪೋ ನಲ್ಲಿ ಮೇಜರ್ ರಾಲೆಂಗ್ನಾವ್ ಬಾಬ್ ಖಾಥಿಂಗ್ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಿಜಿಜು, ಖಾಥಿಂಗ್ ಅವರ ಕೊಡುಗೆಗಳನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ, ಈ ವರೆಗೂ ದೇಶ ಮರೆತಿದ್ದ ಹಿರೋಗೆ ಸೂಕ್ತ ಗೌರವ ಸಿಗಲಿದೆ" ಎಂದು ಹೇಳಿದ್ದಾರೆ.
ಸ್ಮಾರಕಕ್ಕೆ ಶಂಕುಸ್ಥಾಪನೆ ನಡೆಯಲಿರುವ ಕಾರ್ಯಕ್ರಮದಲ್ಲಿ ಖಾಥಿಂಗ್ ಅವರ ಪುತ್ರ, ನಿವೃತ್ತ ಐಆರ್ ಎಸ್ ಅಧಿಕಾರಿ ಜಾನ್ ಹಾಗೂ ಅವರ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ. ಎರಡನೇ ವಿಶ್ವಯುದ್ಧಕ್ಕೂ ಮುನ್ನ ತವಾಂಗ್ ಈ ಹಿಂದಿದ್ದ ಟಿಬೇಟ್ ಸರ್ಕಾರದ ಆಡಳಿತದಲ್ಲಿತ್ತು. ಈ ಬಳಿಕ 1951 ರಲ್ಲಿ ಅದನ್ನು ಭಾರತಕ್ಕೆ ಸೇರಿಸಿಕೊಳ್ಳಲು ನಡೆದ ಕಾರ್ಯಾಚರಣೆಯ ಭಾಗವಾಗಿ ಮಣಿಪುರ ಮೂಲದ ನಾಗ ಬುಡಕಟ್ಟಿನ ಖಾಥಿಂಗ್ ಅವರ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ನ 200 ಯೋಧರು ಹಾಗೂ 600 ಪೋರ್ಟರ್ ಗನ್ನೊಳಗೊಂಡ ಜ.17 ರಂದು ಕಾರ್ಯಾಚರಣೆ ನಡೆಸಿತ್ತು.