'ನಮ್ಮ ಆಪ್ತರು ಈ ದೇಶದ ಸಾಮಾನ್ಯ ಜನತೆ, ಅವರ ಪರವಾಗಿ ಎನ್ ಡಿಎ ಸರ್ಕಾರವಿದೆ': ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಮ್ ದೋ, ಹಮಾರೇ ದೋ'ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಶನಿವಾರ ಲೋಕಸಭೆಯಲ್ಲಿ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಸರ್ಕಾರ ಆಪ್ತರಿಗಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ಈ ದೇಶದ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತದೆ ಎಂದರು.
Published: 13th February 2021 11:15 AM | Last Updated: 13th February 2021 11:54 AM | A+A A-

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: 'ಹಮ್ ದೋ, ಹಮಾರೇ ದೋ'ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಶನಿವಾರ ಲೋಕಸಭೆಯಲ್ಲಿ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಸರ್ಕಾರ ಆಪ್ತರಿಗಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ಈ ದೇಶದ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತದೆ ಎಂದರು.
ಕ್ರೋನಿಗಳು(ಆಪ್ತರು, ಗೆಳೆಯರು) ಎಲ್ಲಿದ್ದಾರೆ, ಅವರು ಬಹುಶಃ ಆ ಪಕ್ಷದ ನೆರಳಿನಲ್ಲಿ ಅಡಗಿಕೊಂಡು ಕುಳಿತಿರಬೇಕು, ಅದಕ್ಕಾಗಿ ಅವರನ್ನು ಜನ ತಿರಸ್ಕರಿಸಿದ್ದಾರೆ. ಬಂದರನ್ನು ಅಭಿವೃದ್ಧಿ ಮಾಡಲು ಸಹ ಅವರು ಗುಪ್ತವಾಗಿ ಕರೆದಿದ್ದಾರೆಯೇ ಹೊರತು ಮುಕ್ತ ಟೆಂಡರ್ ಕರೆಯಲಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.
ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಗಳಂತವು ಈ ದೇಶದ ಬಡವರಿಗಾಗಿ ಇರುವಂಥವು. ಈ ಬಾರಿಯ ಬಜೆಟ್ ಮೂಲಕ ಆತ್ಮನಿರ್ಭರ ಭಾರತವನ್ನು ಹೊಂದಲು ಸಾಧ್ಯವಿದೆ ಎಂದು ಸಮರ್ಥಿಸಿಕೊಂಡರು.
ನಾವು ಆಪ್ತರಿಗಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ಈ ದೇಶದ ಜನತೆಗಾಗಿ ಕೆಲಸ ಮಾಡುತ್ತೇವೆ ಎಂದರು, ಕೃಷಿ ಕಾಯ್ದೆ ವಿರುದ್ಧ ಮೊನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಹಮ್ ದೋ ಹಮಾರೆ ದೋ ಘೋಷಣೆಯನ್ನು ಹೊರಡಿಸಿದ್ದರು.
ವರ್ಷಗಳ ಹಿಂದೆ ಕುಟುಂಬ ಘೋಷಣೆಯೊಂದಿತ್ತು, ಅದು ಹಮ್ ದೋ, ಹಮಾರೇ ದೋ(ನಾವಿಬ್ಬರು, ನಮಗಿಬ್ಬರು), ಆದರೆ ಕೊರೋನಾದಂತಹ ಸಾಂಕ್ರಾಮಿಕ ಮತ್ತೊಂದು ರೀತಿಯಲ್ಲಿ ಒಕ್ಕರಿಸಿದಂತೆ ಈ ಘೋಷಣೆ ಕೂಡ ಬಂತು. ಇಂದು ನಾಲ್ಕು ಜನರು ದೇಶವನ್ನು ಆಳುತ್ತಿದ್ದಾರೆ ಎಂದು ಹೆಸರು ಹೇಳದೆ ರಾಹುಲ್ ಗಾಂಧಿ ಸರ್ಕಾರವನ್ನು ಟೀಕಿಸಿದ್ದರು.