ತಮಿಳು ನಾಡಿಗೆ ಇಂದು ಪ್ರಧಾನಿ ಮೋದಿ ಆಗಮನ: ಮೈತ್ರಿ-ರಾಜಕೀಯ ಮಾತುಕತೆಯಿಲ್ಲ, ಅಧಿಕೃತ ಭೇಟಿಯಷ್ಟೆ ಎಂದ ಬಿಜೆಪಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ತಮಿಳು ನಾಡಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಸುಮಾರು 4,486.40 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮೂರು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಇನ್ನು 3,640 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಮತ್ತೆರಡು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Published: 14th February 2021 10:40 AM  |   Last Updated: 14th February 2021 10:40 AM   |  A+A-


PM Narendra Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted By : Sumana Upadhyaya
Source : The New Indian Express

ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ತಮಿಳು ನಾಡಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಸುಮಾರು 4,486.40 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮೂರು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಇನ್ನು 3,640 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಮತ್ತೆರಡು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪೂರ್ಣಗೊಂಡಿರುವ ಯೋಜನೆಗಳೆಂದರೆ ಚೆನ್ನೈ ಮಟ್ರೊ ರೈಲು ಮೊದಲನೇ ಹಂತವನ್ನು 3,770 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗಿದ್ದು ಅದರ ಉದ್ಘಾಟನೆ, ಚೆನ್ನೈ ಸಮುದ್ರ ಮತ್ತು ಅತ್ತಿಪಟ್ಟು ಮಧ್ಯೆ ನಾಲ್ಕನೇ ರೈಲು ಮಾರ್ಗ 293.40 ಕೋಟಿ ರೂಪಾಯಿ ವೆಚ್ಚದಲ್ಲಿ, ವಿಲ್ಲುಪುರಂ-ಕದ್ದಲೂರು-ಮಯಿಲದುತುರೈ-ತಂಜಾವೂರು ಮತ್ತು ಮಯಿಲದುತುರೈ-ತಿರುವರೂರು ಮಾರ್ಗದಲ್ಲಿ 423 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುದೀಕರಣ ವ್ಯವಸ್ಥೆಯ ಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟಿಸಲಿದ್ದಾರೆ.

ಬೃಹತ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ (2,640 ಕೋಟಿ ರೂ.) ಮತ್ತು II ಟಿ ಮದ್ರಾಸ್‌ನ ಡಿಸ್ಕವರಿ ಕ್ಯಾಂಪಸ್‌ಗೆ (1,000 ಕೋಟಿ ರೂ.) ಅಡಿಪಾಯ ಹಾಕಲಿದ್ದಾರೆ.ಈ ಬಾರಿ ತಮಿಳು ನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಎಡಿಎಂಕೆ ಜೊತೆ ಮೈತ್ರಿಯ ಬಗ್ಗೆ ಮಾತುಕತೆ ನಡೆಸಲು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ ಎಂಬ ಊಹಾಪೋಹಗಳಿದ್ದರೂ ಕೂಡ ಮೋದಿಯವರ ಇಂದಿನ ಭೇಟಿ ಅಧಿಕೃತವೇ ಹೊರತು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ತಮಿಳು ನಾಡಿನಲ್ಲಿ ಬಿಜೆಪಿ ರಾಜಕೀಯ ಸಹ ಉಸ್ತುವಾರಿ ಪಿ ಸುಧಾಕರ್ ರೆಡ್ಡಿ ತಿರುವೊತ್ರಿಯೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇಂದಿನ ಪ್ರಧಾನಿ ಭೇಟಿ ಸಂದರ್ಭದಲ್ಲಿ ರಾಜಕೀಯ ಮಾತುಕತೆಗಳು ನಡೆಯುವ ಸಾಧ್ಯತೆ ಕಡಿಮೆ. ಒಂದು ಬಾರಿ ಚುನಾವಣಾ ಅಧಿಸೂಚನೆ ಹೊರಬಿದ್ದ ಮೇಲೆ, ಮೈತ್ರಿಯ ಬಗ್ಗೆ ಮಾತುಕತೆ ಆರಂಭವಾಗಲಿದೆ ಎಂದರು. ತಮಿಳು ನಾಡಿನ ಬಿಜೆಪಿ ಉಸ್ತುವಾರಿ ಸಿ ಟಿ ರವಿ ಕೂಡ ಅದೇ ಮಾತನ್ನು ಹೇಳುತ್ತಾರೆ.

ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯುವ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬಂಗೌರ್ ಅಡಿಗಲಾರ್ ಅವರು ಪ್ರಧಾನ ಮಂತ್ರಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮೋದಿಯವರ ಭೇಟಿ ವೇಳಾಪಟ್ಟಿಯ ಮಧ್ಯೆ, ಅನೌಪಚಾರಿಕ ಸಭೆಗಳಿಗೆ 15 ನಿಮಿಷಗಳನ್ನು ಕಾಯ್ದಿರಿಸಲಾಗಿದೆ. ಅಡಿಗಲಾರ್ ಮತ್ತು ಇತರರು ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಕೂಡ ಅವರನ್ನು ಅಲ್ಲಿಯೇ ಭೇಟಿಯಾಗುವ ನಿರೀಕ್ಷೆಯಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp