'ತಮಿಳು ನಾಡು ರೈತರು ದಾಖಲೆಯ ಪ್ರಮಾಣದಲ್ಲಿ ಆಹಾರ ಉತ್ಪಾದಿಸಿದ್ದು, ಜಲ ಸಂಪನ್ಮೂಲಗಳ ಸದ್ಭಳಕೆ ಮಾಡಿದ್ದಾರೆ': ಪ್ರಧಾನಿ ನರೇಂದ್ರ ಮೋದಿ
ತಮಿಳು ನಾಡಿನ ರೈತರು ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಬೆಳೆದಿದ್ದು, ಜಲ ಸಂಪನ್ಮೂಲವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಲ ಸಂರಕ್ಷಣೆಗೆ ಏನು ಸಾಧ್ಯವಿದೆಯೋ ಅದನ್ನು ನಾವು ಮಾಡಬೇಕು. 'ಪ್ರತಿ ಹನಿಯಿಂದ ಹೆಚ್ಚಿನ ಬೆಳೆ' ಎಂಬ ಮಂತ್ರವನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
Published: 14th February 2021 02:59 PM | Last Updated: 14th February 2021 02:59 PM | A+A A-

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಚೆನ್ನೈ: ತಮಿಳು ನಾಡಿನ ರೈತರು ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಬೆಳೆದಿದ್ದು, ಜಲ ಸಂಪನ್ಮೂಲವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಲ ಸಂರಕ್ಷಣೆಗೆ ಏನು ಸಾಧ್ಯವಿದೆಯೋ ಅದನ್ನು ನಾವು ಮಾಡಬೇಕು. 'ಪ್ರತಿ ಹನಿಯಿಂದ ಹೆಚ್ಚಿನ ಬೆಳೆ' ಎಂಬ ಮಂತ್ರವನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಚೆನ್ನೈಯಲ್ಲಿಂದು ವಿವಿಧ ಯೋಜನೆಗಳನ್ನು ಉದ್ಘಾಟಿಸಿ, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.
ತಮಿಳು ನಾಡು ಈಗಾಗಲೇ ಭಾರತದಲ್ಲಿ ಆಟೊಮೊಬೈಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಯುದ್ಧ ವಿಮಾನ ತಯಾರಿಕೆಯ ಕೇಂದ್ರವಾಗಿ ಕೂಡ ಭಾರತದಲ್ಲಿ ತಮಿಳು ನಾಡು ಬೆಳೆಯುತ್ತಿದೆ, ತಮಿಳು ನಾಡಿನಲ್ಲಿ ರಕ್ಷಣಾ ಕಾರಿಡಾರ್ ಇದೆ. ಇದರಲ್ಲಿ ಸರ್ಕಾರ 8,100 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಅರ್ಜುನ್ ಯುದ್ಧ ಟ್ಯಾಂಕ್ ನ್ನು ದೇಶಕ್ಕೆ ಇಂದು ಸಮರ್ಪಿಸಲು ಹೆಮ್ಮೆಯಾಗುತ್ತಿದೆ ಎಂದರು.
ದೇವೇಂದ್ರಕುಲ್ಲ ವೆಲ್ಲಲರ್ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಈ ಸಮುದಾಯ ತನ್ನ ಪರಂಪರೆಯ ಹೆಸರಿನಿಂದ ಗುರುತಿಸಿಕೊಂಡಿದೆ ಹೊರತು ಸಂವಿಧಾನದ ಪರಿಚ್ಛೇದದಲ್ಲಿರುವ 6-7 ಹೆಸರುಗಳಿಂದಲ್ಲ ಎಂದರು.
ಶ್ರೀಲಂಕಾ ತಮಿಳರ ಸಮಸ್ಯೆಗಳನ್ನು, ಅವರಿಗೆ ಸಿಗಬೇಕಾದ ಹಕ್ಕುಗಳನ್ನು ಆಗಾಗ ಭಾರತ ಪ್ರಸ್ತಾಪಿಸುತ್ತಲೇ ಇದೆ. ಶ್ರೀಲಂಕಾ ತಮಿಳರು ಸಮಾನತೆ, ನ್ಯಾಯ, ಶಾಂತಿ ಮತ್ತು ಗೌರವದಿಂದ ಬದುಕು ನಡೆಸುವಂತಾಗಬೇಕು. ಪ್ರಸ್ತುತ ಶ್ರೀಲಂಕಾದ ಬಂಧನದಲ್ಲಿ ಯಾವೊಬ್ಬ ತಮಿಳು ಮೀನುಗಾರರೂ ಕೂಡ ಇಲ್ಲ. ಅದೇ ರೀತಿ 313 ದೋಣಿಗಳನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ ದೋಣಿಗಳ ಬಿಡುಗಡೆಗೆ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಚೆನ್ನೈ ನಗರ ಸಂಪೂರ್ಣ ಶಕ್ತಿಯುತವಾದ ನಗರಿಯಾಗಿದ್ದು ಇಲ್ಲಿನ ಜನರು ಉತ್ಸಾಹಿಗಳಾಗಿದ್ದಾರೆ. ತುಂಬ ಜ್ಞಾನಿಗಳಿರುವ ಸೃಜನಾತ್ಮಕತೆ ಹೊಂದಿರುವವರು ಇಲ್ಲಿದ್ದಾರೆ. ಇಲ್ಲಿಂದ ನಾವು ಪ್ರಮುಖ ಮೂಲಭೂತ ಸೌಕರ್ಯಗಳನ್ನು ಆರಂಭಿಸುತ್ತೇವೆ. ಈ ಯೋಜನೆಗಳು ನೂತನ ಸಂಶೋಧನೆ ಮತ್ತು ಸ್ವದೇಶಿ ನಿರ್ಮಿತ ಯೋಜನೆಗಳಿಗೆ ಗುರುತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.